ಕೊರೊನಾ ಮಹಾಮಾರಿಯಿಂದಾಗಿ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇತ್ತ ಜನರ ಜೀವನ ಸಹಜ ಸ್ಥಿತಿಗೆ ಮರುಕಳಿಸುತ್ತಿದ್ದರೂ ಉದ್ಯಮಗಳು ಮಾತ್ರ ಚೇತರಿಕೆ ಕಾಣುತ್ತಿಲ್ಲ. ಇದರಲ್ಲಿ ಕೆ.ಎಸ್.ಆರ್.ಟಿ.ಸಿ. ಕೂಡ ನಷ್ಟದಿಂದ ಚೇತರಿಕೆ ಕಾಣುತ್ತಿಲ್ಲ.
ಹೌದು, ಸದ್ಯ ಜನ ಜೀವನ ಒಂದು ಹಂತಕ್ಕೆ ಮರುಕಳಿಸುತ್ತಿದೆ. ಸಾರಿಗೆ ಸಂಚಾರ ಕೂಡ ಆರಂಭವಾಗಿದೆ. ಆದರೆ ಜನ ಮಾತ್ರ ಬಸ್‌ಗಳ ಬಳಿ ಸುಳಿಯುತ್ತಿಲ್ಲ. ರಾಮನಗರದಲ್ಲಿಯೂ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ದಿನಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಕೊರೊನಾ ಆತಂಕದಿಂದಾಗಿ ಜನ ಬಸ್‌ಗಳತ್ತ ಸುಳಿಯುತ್ತಿಲ್ಲ. ತಮ್ಮ ಕೆಲಸಗಳಿಗೆ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ.
ರಾಮನಗರ ವಿಭಾಗದಲ್ಲಿ ಒಟ್ಟು 6 ಘಟಕಗಳು ಸೇರಿವೆ. ಇದರಲ್ಲಿ ನಿತ್ಯ 400 ಮಾರ್ಗದಲ್ಲಿ ಬಸ್‌ಗಳು ಸಂಚಾರ ಮಾಡುತ್ತಿವೆ. ಆದರೆ ಈ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀರ ವಿರಳ ಇದೆ.
ಕೊರೊನಾಕ್ಕೂ ಮುನ್ನ ಈ ರ್ಮಾಗಳಲ್ಲಿ 52 ರಿಂದ 55 ಲಕ್ಷ ಹಣ ಸಂಗ್ರಹವಾಗುತ್ತಿತ್ತು. ಆದರೆ ಲಾಕ್‌ಡೌನ್ ತೆರವುಗೊಂಡ ನಂತರ 40 ರಿಂದ 45 ಲಕ್ಷ ಹಣ ಸಂಗ್ರಹವಾಗುತ್ತಿದ್ದು, ಒಟ್ಟು 10 ರಿಂದ 15 ಲಕ್ಷ ರೂ. ನಷ್ಟವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಪ್ರಯಾಣಿಕರ ಸ್ಪಂದನೆ ಇಲ್ಲದ ಮಾರ್ಗಗಳಲ್ಲಿ ಬಸ್ ಸಂಚಾರ ಬಂದ್ ಮಾಡುವ ಚಿಂತನೆ ಇದೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ.