ಆಸ್ಪತ್ರೆ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಕುಟುಂಬಸ್ಥರು ಯಾರದ್ದೋ ದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆ ಸಾವು ಎಂದು ಘೋಷಿಸಿದ ವ್ಯಕ್ತಿ ಬದುಕಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ಖಾರ್ಡಾದ ಬಲರಾಂಪುರದ ಬಸು ಆಸ್ಪತ್ರೆಗೆ 75 ವರ್ಷದ ಶಿಬ್ದಾಸ್ ಬ್ಯಾನರ್ಜಿಯನ್ನ ದಾಖಲು ಮಾಡಲಾಗಿತ್ತು. ಕಳೆದ ವಾರ ಈ ವೃದ್ಧ ಸತ್ತಿದ್ದಾನೆ ಎಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ ಬೇರೊಂದು ಶವವನ್ನ ಕುಟುಂಬಸ್ಥರಿಗೆ ರವಾನಿಸಿದೆ.
ಕುಟುಂಬಸ್ಥರು ವ್ಯಕ್ತಿಯ ಅಂತ್ಯಕ್ರಿಯೆಗೆ ನಡೆಸುತ್ತಿದ್ದ ವೇಳೆ ವ್ಯಕ್ತಿ ಬದುಕಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವಾಗಿ ನಾಲ್ಕು ಸದಸ್ಯರ ವಿಚಾರಣಾ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ ಶವ 75 ವರ್ಷದ ಮೋಹಿನಿ ಕುಮಾರ್ ಮುಖರ್ಜಿ ಎಂಬವರದ್ದು ಎಂದು ತಿಳಿದುಬಂದಿದೆ. ಶಿಬ್ದಾ ಬ್ಯಾನರ್ಜಿ ಆಸ್ಪತ್ರೆಗೆ ದಾಖಲಾದ ದಿನವೇ ಮೋಹಿನಿ ಕುಮಾರ್ ಮುಖರ್ಜಿ ದಾಖಲಾಗಿದ್ದರು.