ಕಾರ್ಯಕ್ರಮದ ವೇದಿಕೆಯಲ್ಲೇ ಆಯತಪ್ಪಿ ಬಿದ್ದ ಬಿಜೆಪಿ ಸಂಸದ 23-11-2020 3:50PM IST / No Comments / Posted In: Latest News, India ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಗೋರಖ್ಪುರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಖುರ್ಚಿಯಿಂದ ಆಯತಪ್ಪಿ ಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಜೆಪಿ ನಾಯಕ ರವಿ ಕಿಶನ್ಗೆ ವೇದಿಕೆಯ ಮೇಲೆ ಕೇಸರಿ ಬಣ್ಣದ ಶಾಲು ಹಾಕಿ ಸನ್ಮಾನಿಸಲಾಗಿತ್ತು. ಸನ್ಮಾನ ಸ್ವೀಕರಿಸಿದ ಬಳಿಕ ಇನ್ನೇನು ಕುರ್ಚಿ ಮೇಲೆ ಕೂರಬೇಕು ಅನ್ನೋವಷ್ಟರಲ್ಲಿ ಬಿದ್ದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಕಳೆದ ತಿಂಗಳು ಬಾಬಾ ರಾಮದೇವ್ ಆನೆ ಮೇಲೆ ಕೂತು ಯೋಗ ಮಾಡಲು ಹೋಗಿ ಬಿದ್ದ ದೃಶ್ಯವೂ ಸಹ ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. गोरखपुर से BJP सांसद रवि किशन की कुर्सी सरकी, कार्यक्रम के दौरान ही धड़ाम से गिर पड़े#RaviKishan #ViralVideo pic.twitter.com/zpz26SQgwL — Rajender Singh Dhillon (@rajendersingh56) November 22, 2020