ಸೇಂಟ್ ಪೀಟರ್ಬರ್ಗ್: ಆಸ್ಪತ್ರೆ ಕಟ್ಟಡದಲ್ಲಿ ಉಂಟಾಗಿದ್ದ ಬೆಂಕಿಯಿಂದ ನಾಲ್ವರು ರೋಗಿಗಳನ್ನು ಗರ್ಭಿಣಿ ನಾಯಿಯೊಂದು ರಕ್ಷಣೆ ಮಾಡಿದ ವಿಶಿಷ್ಟ ಘಟನೆ ರಷ್ಯಾದ ಲೆನಿನ್ಗ್ರೇಡ್ ಪ್ರದೇಶದಲ್ಲಿ ನಡೆದಿದೆ.
ಮೆಟಿಲ್ಡಾ ಎಂಬ ಹೆಸರಿನ ಗರ್ಭಿಣಿ ನಾಯಿ ಬೆಂಕಿ ಬಿದ್ದ ಕಟ್ಟಡದಲ್ಲಿತ್ತು. ಅಲ್ಲಿ ತುಂಬಿಕೊಂಡಿದ್ದ ಕಾರ್ಬನ್ ಮೊನಾಕ್ಸೈಡ್ ಹೊಗೆಯ ನಡುವೆ ಓಡಿ ಬಂದು ಕಟ್ಟಡಕ್ಕೆ ಬೆಂಕಿ ಬಿದ್ದ ಬಗ್ಗೆ ತನ್ನ ಯಜಮಾನನಿಗೆ ಮಾಹಿತಿ ನೀಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಎಲೆನಾ ಕಾಲಿನಿನಾ ಹಾಗೂ ಅಲೆಗ್ಸಾಂಡರ್ ಕ್ಸಿಂಕೇವಿಚ್ ಎಂಬ ಸ್ವಯಂ ಸೇವಕರು ಆಸ್ಪತ್ರೆಯಲ್ಲಿ ಸಿಲುಕಿದ್ದ ನಾಲ್ವರನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ.
ಘಟನೆಯಲ್ಲಿ ನಾಯಿಯ ಮುಖ, ಕುತ್ತಿಗೆ ಹೊಟ್ಟೆ ಸೇರಿ ವಿವಿಧೆಡೆ ಸಾಕಷ್ಟು ಸುಟ್ಟ ಗಾಯಗಳಾಗಿವೆ. ಆದರೆ, ನಾಯಿ ನಾಲ್ಕು ಜೀವಗಳನ್ನು ಉಳಿಸಿದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೇಂಟ್ ಪೀಟರ್ಬರ್ಗ್ನ ವಾಸಿಲೇಟ್ ಶಲ್ಟರ್ನ ಪ್ರಾಣಿ ದಯಾ ಸಂಘದ ಸದಸ್ಯರು ನಾಯಿಯ ಕಾರ್ಯದ ಬಗ್ಗೆ ಪ್ರಚಾರ ನಡೆಸಿದ್ದಾರೆ.