ನ್ಯೂರ್ಯಾಕ್: ಅಮೆರಿಕಾದ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ 2020 ನೇ ಸಾಲಿನಲ್ಲಿ ಪ್ರಕಟವಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ವಿಶ್ವದ 100 ಪುಸ್ತಕಗಳ ಪಟ್ಟಿ ಮಾಡಿದೆ. ಅದರಲ್ಲಿ ಭಾರತೀಯ ಮೂಲದ ಮೂವರು ಲೇಖಕರ ಪುಸ್ತಕಗಳೂ ಸೇರಿರುವುದು ವಿಶೇಷ.
ಭಾರತೀಯ ಮೂಲದ ಮೇಘಾ ಮುಜುಂದಾರ್ ಅವರು ಬರೆದ ಭಯೋತ್ಪಾದನೆಗೆ ಸಂಬಂಧಿಸಿದ ಕತೆ ಇರುವ ಪುಸ್ತಕ ‘ಎ ಬರ್ನಿಂಗ್’, ಕೇರಳದಲ್ಲಿ ಬೆಳೆದ ದೀಪಾ ಅನಪ್ಪಾರ ಅವರು ಬರೆದ ಕಾದಂಬರಿ ‘ಡಿಜಿನ್ ಪೆಟ್ರೊಲ್ ಆನ್ ದ ಪರ್ಪಲ್ ಲೈನ್’ ಹಾಗೂ ಲಂಡನ್‌ನಲ್ಲಿ ನೆಲೆಸಿರುವ ಪತ್ರಕರ್ತ ಸಮಂತ ಸುಬ್ರಹ್ಮಣ್ಯನ್ ಅವರ ‘ಅ ಡೊಮೆಸ್ಟಿಕ್ ಕ್ಯಾರೆಕ್ಟರ್ : ದ ರ‍್ಯಾಡಿಕಲ್ ಸೈನ್ಸ್ ಆಂಡ್ ರೆಸ್ಟ್‌ಲೆಸ್ ಪೊಲಿಸ್ಟಿಕ್ ಆಫ್ ಜೆ.ಬಿ.ಎಸ್.ಹಲ್ಡೆನ್’ ಎಂಬ ಪುಸ್ತಕಗಳು ವಿಮರ್ಶಕರ ಮೆಚ್ಚುಗೆ ಪಡೆದಿವೆ.
ಅಷ್ಟೇ ಅಲ್ಲದೆ, ಬ್ರಿಟಿಷ್ ಇಂಡಿಯನ್ ಲೇಖಕ ಹರಿ ಕುಂಜ್ರು ಅವರ ‘ರೆಡ್ ಪಿಲ್’ ಎಂಬ ಪುಸ್ತಕ ಕೂಡ ಈ ಪಟ್ಟಿಯಲ್ಲಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಆತ್ಮ ಚರಿತ್ರೆ ‘ಅ ಪ್ರೊಮಿಸ್ಡ್ ಲ್ಯಾಂಡ್’ ಹೆಸರೂ ವಿಮರ್ಶಕರ ಮೆಚ್ಚುಗೆ 100 ಪುಸ್ತಕಗಳ ಪಟ್ಟಿಯಲ್ಲಿದೆ.