ನವದೆಹಲಿ: ಮೊಬೈಲ್ ಡೇಟಾ ಮತ್ತು ಕರೆ ದರ ಶೀಘ್ರವೇ ಏರಿಕೆಯಾಗುವ ಸಾಧ್ಯತೆ ಇದೆ. ಮೊಬೈಲ್ ಬಳಕೆದಾರರಿಗೆ ಶೀಘ್ರವೇ ದರ ಏರಿಕೆ ಬಿಸಿ ತಟ್ಟಲಿದೆ.
ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನೀಲ್ ಮಿತ್ತಲ್, ಈಗಿರುವ ದರಗಳಲ್ಲಿ ದೂರಸಂಪರ್ಕ ಸೇವೆಯನ್ನು ಮುಂದುವರೆಸಲು ಸಾಧ್ಯವಿಲ್ಲ. ದರ ಏರಿಕೆ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ. ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ದರ ಏರಿಕೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ವೊಡಾಫೋನ್ ಐಡಿಯಾ ಕೂಡ ಮೊಬೈಲ್ ದರ ಏರಿಕೆಯ ಬಗ್ಗೆ ಈ ಹಿಂದೆಯೇ ತಿಳಿಸಿದೆ. ಸುನೀಲ್ ಮಿತ್ತಲ್ ಅವರ ಪ್ರಕಾರ ದರ ಏರಿಕೆ ಈಗ ಅನಿವಾರ್ಯವಾಗಿದೆ. ವೊಡಾಫೋನ್ ಐಡಿಯಾ ಶುಲ್ಕ ಶೇಕಡ 15 ರಿಂದ 20 ರಷ್ಟು ಏರಿಕೆಯಾಗಬಹುದು. ಅದೇ ರೀತಿ ಏರ್ಟೆಲ್ ಕರೆ, ಡೇಟಾ ದರ ಏರಿಕೆಯಾಗಲಿದೆ. ದರ ಸಮರ ನಡೆಸಿದ್ದ ಜಿಯೋ ಕೂಡ ಕರೆ ಮತ್ತು ಡೇಟಾ ದರ ಏರಿಕೆ ಮಾಡಲು ಚಿಂತಿಸಿದೆ ಎನ್ನಲಾಗಿದೆ.