ನವದೆಹಲಿ: ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಶೇಕಡ 60 ರಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ.
ದೇಶಿಯ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತಲೂ ಅಧಿಕ ಪರಿಣಾಮಕಾರಿ ಎನ್ನುವುದು ಗೊತ್ತಾಗಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಈ ಬಗ್ಗೆ ಮಾಹಿತಿ ನೀಡಿದ್ದು, ಲಸಿಕೆ ಪ್ರಯೋಗದಲ್ಲಿ ಆಶಾವಾದ ಮೂಡಿಸಿದೆ.
ಅಮೆರಿಕದ ಫೈಜರ್ ಕಂಪನಿ ಲಸಿಕೆ ಶೇಕಡ 95 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿಕೊಂಡಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಗುಣಮಟ್ಟ ವಿಭಾಗದ ಅಧ್ಯಕ್ಷ ಸಾಯಿ ಪ್ರಸಾದ್ ಅವರು, ನಿಗದಿಗಿಂತ ಶೇಕಡ 60 ರಷ್ಟು ಪರಿಣಾಮಕಾರಿತ್ವ ಸಾಧಿಸಲಾಗಿದೆ. ಯಾವುದೇ ಲಸಿಕೆ ಶೇಕಡ 50 ರಷ್ಟು ಪರಿಣಾಮಕಾರಿಯಾಗಿದ್ದರೆ ಚಿಕಿತ್ಸೆಗೆ ಅಂಗೀಕರಿಸಬಹುದಾಗಿದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವಾಗಿದೆ. ಅದಕ್ಕಿಂತಲೂ ಅಧಿಕ ಪರಿಣಾಮಕಾರಿಯಾಗಿರುವ ದೇಶಿಯ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಯಶಸ್ಸಿನ ಹಾದಿಯಲ್ಲಿದ್ದು, 2021 ರ ಮಧ್ಯದ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.