ಸೂರ್ಯ ರಶ್ಮಿಯನ್ನೇ ಬಳಸಿಕೊಂಡು ಗಿಡಗಳು ಆಹಾರ ತಯಾರಿಸುತ್ತವೆ. ಬೆಳಕು ತಮ್ಮ ಮೇಲ್ಮೈ ಮೇಲೆ ಬಿದ್ದಾಗ ಅವು ಸ್ಪಂದಿಸುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಅದನ್ನು ಬರಿಗಣ್ಣಿನಲ್ಲಿ ಗುರುತಿಸುವುದು ತುಂಬಾ ಕಷ್ಟ. ಅಮೆರಿಕಾದಲ್ಲಿ ಇತ್ತೀಚೆಗೆ ತೆಗೆದ ವಿಡಿಯೋವೊಂದು ಗಿಡಗಳ ಚಲನೆಯ ಅಪರೂಪದ ಕ್ಷಣಗಳನ್ನು ಸೆರೆ ಹಿಡಿದಿದೆ.
ಮನೆಯ ಎದುರು ಕುಂಡದಲ್ಲಿರುವ ಬಣ್ಣದ ಗಿಡಗಳ ನಡುವೆ ಗಡಿಯಾರವನ್ನಿಟ್ಟು ವಿಡಿಯೋ ಶೂಟ್ ಮಾಡಲಾಗಿದೆ. ದಿನದ 24 ಗಂಟೆಯ ವಿಡಿಯೋವನ್ನು ಅತಿ ವೇಗವಾಗಿ ಓಡಿಸಿ 12 ಸೆಕೆಂಡ್ ಗಳಿಗೆ ಇಳಿಸಲಾಗಿದೆ. ಬೆಳಗ್ಗೆ ಸೂರ್ಯ ರಶ್ಮಿ ಬಿದ್ದ ತಕ್ಷಣ ಅರಳುವ ಗಿಡಗಳು, ರಾತ್ರಿ ಮುದುಡುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಮರಾಂತಾಸಿಯಾ ವರ್ಗಕ್ಕೆ ಸೇರಿದ ಕಲಾಥಿಯಾ ಬಣ್ಣದ ಗಿಡದ ಈ ವಿಡಿಯೋವು ಮೊದಲು ‘@Melora_1 ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಆಗಿತ್ತು. ವಿಡಿಯೋವನ್ನು 7.3 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ, ಸ್ಪೇಸ್ ಎಕ್ಸ್ ಸಿಇಒ ಇಲೊನ್ ಮಸ್ಕ್ ಕೂಡ ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.
https://twitter.com/ThingsWork/status/1329170230531092481?ref_src=twsrc%5Etfw%7Ctwcamp%5Etweetembed%7Ctwterm%5E1329170230531092481%7Ctwgr%5E&ref_url=https%3A%2F%2Fwww.ndtv.com%2Foffbeat%2Felon-musk-ivanka-trump-like-this-viral-time-lapse-with-7-million-views-2327432