ಕೋಳಿ ಹಿಡಿಯಲು ಬಂದ ಬೃಹತ್ ಹಾವೊಂದು ಉರುಳಿನಲ್ಲಿ ಸಿಕ್ಕಿ ಬಿದ್ದಂತೆ ಕಾಣುವ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎರಡು ವರ್ಷದ ಹಿಂದೇ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದರು. ಈಗ ಮತ್ತೊಮ್ಮೆ ಟ್ವೀಟ್ ಮಾಡಲಾಗಿದೆ. “ಕೋಳಿ ಕಳ್ಳರನ್ನು ಹಿಡಿಯುವ ಪ್ರಯತ್ನ” ಎಂದು ಕ್ಯಾಪ್ಶನ್ ನೀಡಲಾಗಿದೆ.
ವಿಡಿಯೋದಲ್ಲಿ ಮೇಲ್ನೋಟಕ್ಕೆ ಕಾಣುವಂತೆ ಸಾಲಾಗಿ ಒಂದಷ್ಟು ಬಿದಿರಿನ ಗುಟ್ಟಗಳನ್ನು ನೆಡಲಾಗಿದೆ. ಅದರ ನಡುವೆ ಒಂದು ನೀಲಿ ಡ್ರಂ ಮಲಗಿಸಿ ಉರುಳು ಸೃಷ್ಟಿಸಲಾಗಿದೆ. ರಾಡಿ ಮಣ್ಣಿನಲ್ಲಿ ಬರುವ ಬೃಹತ್ ಅನಕೊಂಡಾದಂಥ ಹಾವು ಡ್ರಂನೊಳಗೆ ತಲೆ ಹೊಕ್ಕಿಸಿ ಅಪಾಯಕ್ಕೆ ಸಿಲುಕುವ ವಿಡಿಯೋ ಇದಾಗಿದೆ. ಹಾವು ರಾಡಿಯಲ್ಲಿ ಒದ್ದಾಡುವ ದೃಶ್ಯಗಳಿವೆ.
ಆದರೆ, ಫ್ಯಾಕ್ಟ್ ಚೆಕ್ಕಿಂಗ್ ವೆಬ್ ಸೈಟ್ ಸ್ನೋಪ್ಸ್ ಇದು ಪರಿವರ್ತನೆ ಮಾಡಿದ ವಿಡಿಯೋ ಎಂದು ಹೇಳಿದೆ. ವಿಡಿಯೋದಲ್ಲಿ ದೊಡ್ಡ ಡ್ರಂನಂತೆ ಕಾಣುವುದು ಸಣ್ಣ ಪೈಪ್ ಅಷ್ಟೆ. ಹಾವು ದೊಡ್ಡ ಅನಕೊಂಡಾ ಏನಲ್ಲ. ಕೋಳಿ ಕದಿಯಲು ಬರುವ ಸಾಮಾನ್ಯ ಗಾತ್ರದ ಹಾವು. ವಿಡಿಯೋವನ್ನು ಮೆನಿಪ್ಯುಲೇಟ್ ಮಾಡಲಾಗಿದೆ ಎಂದು ವೆಬ್ ಸೈಟ್ ತಿಳಿಸಿದೆ. ಅಲ್ಲದೆ, ಉರುಳು ಸೃಷ್ಟಿ ಮಾಡುವ ವಿಡಿಯೋವನ್ನು ಅಪ್ ಲೋಡ್ ಮಾಡಿದೆ.
https://twitter.com/AMAZlNGSCIENCE/status/1329648481577824257?ref_src=twsrc%5Etfw%7Ctwcamp%5Etweetembed%7Ctwterm%5E1329648481577824257%7Ctwgr%5E&ref_url=https%3A%2F%2Fwww.ndtv.com%2Foffbeat%2Fhuge-snake-gets-caught-in-trap-but-theres-more-to-video-than-meets-the-eye-2327966