alex Certify ಹೆಣ್ಣು ಮಗು ಆಗುತ್ತದೆಂದು ಬಲವಂತದ ಗರ್ಭಪಾತ, ರಕ್ತಸ್ರಾವದಿಂದ ಮಹಿಳೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಮಗು ಆಗುತ್ತದೆಂದು ಬಲವಂತದ ಗರ್ಭಪಾತ, ರಕ್ತಸ್ರಾವದಿಂದ ಮಹಿಳೆ ಸಾವು

ಚಿಕ್ಕಬಳ್ಳಾಪುರ: ಗಂಡು ಮಗುವಿನ ಆಸೆಗೆ ಬಲವಂತದ ಗರ್ಭಪಾತ ಮಾಡಿಸಿದ್ದರಿಂದ ಮಹಿಳೆ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೋತ್ತಪಲ್ಲಿಯಲ್ಲಿ ನಡೆದಿದೆ.

26 ವರ್ಷದ ಸುಕನ್ಯಾ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಸುಕನ್ಯಾ – ಸೋಮಶೇಖರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಮೂರನೇ ಸಲ ಗರ್ಭಿಣಿಯಾಗಿದ್ದಾರೆ. ಸುಕನ್ಯಾ ಗರ್ಭಿಣಿಯಾಗಿದ್ದರಿಂದ ಗಂಡು ಮಗು ಬೇಕೆಂದು ಪತಿ ಮತ್ತು ಆತನ ಕುಟುಂಬದವರು ಭ್ರೂಣ ಪರೀಕ್ಷೆ ಮಾಡಿಸಿದ್ದಾರೆ. ಹೆಣ್ಣು ಮಗುವಾಗುತ್ತದೆ ಎಂದು ಗೊತ್ತಾದ ನಂತರ ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ ಎನ್ನಲಾಗಿದೆ.

ಸುಕನ್ಯಾ ವಿರೋಧದ ನಡುವೆಯೂ ಗರ್ಭಪಾತ ಮಾಡಿಸಿದ್ದು, ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿ ತಲುಪಿದ್ದ ಸುಕನ್ಯಾ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತ ಸುಕನ್ಯಾ ಅವರ ತಂದೆ ಶ್ರೀನಿವಾಸ್ ದೂರು ನೀಡಿದ್ದು, ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ಬಾಗೇಪಲ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...