ಸಂಶೋಧನಾ ಕ್ಯಾಮರದಲ್ಲಿ ಸೆರೆಯಾಯ್ತು ಉಲ್ಕಾಪಾತದ ಅದ್ಭುತ ದೃಶ್ಯ 21-11-2020 4:34PM IST / No Comments / Posted In: Latest News, International ಆಸ್ಟ್ರೇಲಿಯಾದ ಸಮುದ್ರವೊಂದರಲ್ಲಿ ಉಲ್ಕೆ ಬೀಳುವ ದೃಶ್ಯ ಸಿಎಸ್ಐಆರ್ಓ ಸಂಶೋಧನಾ ಹಡಗಿನಲ್ಲಿರುವ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ವೆಸ್ಟಿಗೇಟರ್ ಎಂಬ ಹೆಸರಿನ ಸಂಶೋಧನಾ ಹಡಗಿನಲ್ಲಿದ್ದ ಕ್ಯಾಮರಾ ಸಮುದ್ರವನ್ನ ಪರಿಶೀಲನೆ ಮಾಡುತ್ತಿದ್ದ ವೇಳೆ ಈ ಅದ್ಭುತ ದೃಶ್ಯ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ನವೆಂಬರ್ 18ರ ರಾತ್ರಿ 9.20ರ ಸುಮಾರಿಗೆ ಈ ಘಟನೆ ದಕ್ಷಿಣ ತಸ್ಮಾನಿಯಾದಲ್ಲಿ ನಡೆದಿದೆ. ಬಾಹ್ಯಾಕಾಶದಲ್ಲಿ ಪ್ರಕಾಶಮಾನವಾದ ಬೆಳಕನ್ನ ಹಡಗಿನಲ್ಲಿದ್ದ ಸಿಬ್ಬಂದಿ ನೋಡಿದ್ದಾರೆ. ಬಾಹ್ಯಾಕಾಶದಲ್ಲಿ ಕೆಳಮುಖವಾಗಿ ಬಂದ ಪ್ರಕಾಶಮಾನವಾದ ಬೆಳಕು ಸಮುದ್ರದ ಆಳದಲ್ಲಿ ಕಣ್ಮರೆಯಾಗಿದೆ ಅಂತಾ ಸಿಬ್ಬಂದಿ ತಮ್ಮ ಅನುಭವ ಹಂಚಿಕೊಂಡ್ರು. ಉಲ್ಕಾಪಾತದ ಅದ್ಭುತ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.