ಜೀವನ ಅನ್ನೋದೆ ಹಾಗೆ. ಎಲ್ಲವೂ ಸರಿ ಇದ್ದರೂ ಒಂದು ಸ್ವಲ್ಪ ಮನಸ್ತಾಪ ಬಂದರೂ ಅಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಬಿದ್ದಂತೆ. ಎಲ್ಲದಕ್ಕೂ ಹೊಂದಿಕೊಂಡು ಹೋದರೆ ಮಾತ್ರ ಸುಖ ದಾಂಪತ್ಯ ಜೀವನ ಸಾಧ್ಯ ಅನ್ನೋದು ಅನೇಕರ ಮಾತು. ಹಾಗೆಯೇ ಅನೇಕರಿಗೆ ಅಧಿಕಾರ, ಹಣ ಎಲ್ಲಾ ಇದ್ದರೂ ನೆಮ್ಮದಿ ಇರೋದಿಲ್ಲ. ಇಂತಹದ್ದೇ ಘಟನೆ ಐಎಎಸ್ ಟಾಪರ್ಸ್ ದಂಪತಿ ಜೀವನದಲ್ಲೂ ನಡೆದಿದೆ.
ಹೌದು, 2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತರಬೇತಿಯಲ್ಲೇ ಈ ಇಬ್ಬರು ಪ್ರೀತಿಸಿದ್ದರು. 2018ರಲ್ಲಿ ಮದುವೆಯಾಗಿದ್ದ ಈ ಜೋಡಿ ಇದೀಗ ತಮ್ಮ ದಾಂಪತ್ಯ ಜೀವನಕ್ಕೆ ಕೊನೆಯಾಡುತ್ತಿದ್ದಾರೆ. ಐಎಎಸ್ ಪರೀಕ್ಷೆಯಲ್ಲಿ ಟೀನಾ ಡಾಬಿ ಮೊದಲ ಸ್ಥಾನ ಪಡೆದರೆ, ಅಥರ್ ಖಾನ್ ಐಎಎಸ್ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.
ಇನ್ನು ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಕೊರ್ಟ್ನಲ್ಲಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ದಂಪತಿ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.