ದೇಶದಲ್ಲಿ ಅಪೌಷ್ಟಿಕತೆ ಅನ್ನೋದು ಬಹು ವರ್ಷಗಳಿಂದ ಇರುವ ಸಮಸ್ಯೆ. ಅದೆಷ್ಟೋ ಗರ್ಭಿಣಿಯರು ಈ ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ತುಂಬಾ ಜಾಗರೂಕ ಹಾಗೂ ಆರೋಗ್ಯವಾಗಿ ಇರಬೇಕು. ಅಪೌಷ್ಟಿಕತೆಯಿಂದ ಗರ್ಭಿಣಿಯರು ಸಾವನ್ನಪ್ಪುವುದನ್ನು ತಡೆಯೋದಿಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಜೊತೆಗೆ ರಾಜಸ್ಥಾನ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.
ಹೌದು, ಎರಡನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ರಾಜಸ್ಥಾನ ಸರ್ಕಾರ 6 ಸಾವಿರ ರೂಪಾಯಿಗಳನ್ನು ನೀಡುತ್ತದೆ. ಇಂತಹದೊಂದು ಯೋಜನೆಯನ್ನು ಅಲ್ಲಿನ ಸಿಎಂ ಘೋಷಣೆ ಮಾಡಿದ್ದಾರೆ. ಇಂದಿರಾಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಅವರ ಹೆಸರಿನಲ್ಲೇ ಮಾತೃತ್ವ ಪೋಷಣ ಯೋಜನೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಚಾಲನೆ ನೀಡಿದ್ದಾರೆ.
6 ಸಾವಿರ ರೂಪಾಯಿಗಳನ್ನು ಐದು ಹಂತದಲ್ಲಿ ನೇರವಾಗಿ ಆ ಮಹಿಳೆಯರ ಖಾತೆಗೆ ಹಾಕಲಾಗುತ್ತದೆ. ಈ ಯೋಜನೆಯನ್ನು ಮೊದಲ ಹಂತವಾಗಿ ರಾಜಸ್ಥಾನದ ನಾಲ್ಕು ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಜಾರಿಗೆ ತರಲಾಗುತ್ತದೆ ಎಂದು ರಾಜಸ್ಥಾನ ಸಿಎಂ ಹೇಳಿದ್ದಾರೆ. ಸುಮಾರು 77 ಸಾವಿರ ತಾಯಂದಿರಿಗೆ ಇದು ಅನುಕೂಲವಾಗಲಿದೆ.