ಜೈಪುರ್: ವಿಚ್ಛೇದನ ಕೋರಿ ಐಎಎಸ್ ಟಾಪರ್ಸ್ ಆಗಿದ್ದ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. 2015 ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ್ದ ಟೀನಾ ದಬಿ ಮತ್ತು ಎರಡನೆಯ ರ್ಯಾಂಕ್ ಗಳಿಸಿದ ಕಾಶ್ಮೀರ ಮೂಲದ ಅಥರ್ ಅಮೀರ್ ಖಾನ್ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ.
2018 ರಲ್ಲಿ ಮದುವೆಯಾಗಿದ್ದ ಇವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಿವರ ಮದುವೆ ಬಗ್ಗೆ ಭಾರೀ ಚರ್ಚೆಯಾಗಿತ್ತು. ಹಿಂದೂ ಮಹಾಸಭಾ ಇದೊಂದು ಲವ್ ಜಿಹಾದ್ ಎಂದು ಟೀಕಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರ ಮದುವೆ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.