ನವದೆಹಲಿ: ಉದ್ದಿಮೆಗಳು, ಕಾರ್ಖಾನೆಗಳು ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ದಿನಕ್ಕೆ 12 ಗಂಟೆವರೆಗೆ ಕೆಲಸ ಮಾಡಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದೆ.
12 ಗಂಟೆಯ ಅವಧಿಯಲ್ಲಿ ಒಂದು ಗಂಟೆ ವಿಶ್ರಾಂತಿ ಅವಧಿ ಸೇರಿದೆ. ಈ ಹಿಂದೆ ದಿನಕ್ಕೆ ಗರಿಷ್ಠ 9 ಕೆಲಸಕ್ಕೆ ಅನುಮತಿ ನೀಡಲಾಗಿದ್ದು ಅದನ್ನು 12 ಗಂಟೆಗೆ ಹೆಚ್ಚಳ ಮಾಡಲಾಗಿದೆ. ವಾರಕ್ಕೆ 48 ಗಂಟೆಗಿಂತ ಹೆಚ್ಚು ಕೆಲಸಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.
ಕಾರ್ಮಿಕ ಸಚಿವಾಲಯ ಉದ್ಯೋಗ ನೀತಿ ಮುಖ್ಯಾಂಶದ ಪ್ರಕಾರ, ದಿನಕ್ಕೆ 12 ಗಂಟೆ ಕೆಲಸ ಮಾಡಬಹುದು. ಸತತ 5 ಗಂಟೆಗಿಂತ ಹೆಚ್ಚಿಗೆ ದುಡಿಮೆ ಮಾಡುವಂತಿಲ್ಲ. ಕೆಲಸದ ನಡುವೆ ಕನಿಷ್ಠ ಅರ್ಧ ಗಂಟೆ ವಿಶ್ರಾಂತಿ ಅಗತ್ಯವಿದೆ. ವಾರಕ್ಕೆ 48 ಗಂಟೆಗಿಂತ ಹೆಚ್ಚಿನ ಅವಧಿಯ ಕೆಲಸ ಸಲ್ಲುವುದಿಲ್ಲ. ಕಾರ್ಮಿಕರ ಸುರಕ್ಷತೆ, ಆರೋಗ್ಯ, ಕೆಲಸದ ಸ್ಥಿತಿಗತಿಗಳನ್ನು ಆಧರಿಸಿ ನೀತಿಗಳನ್ನು ಪಾಲಿಸಬೇಕು ಎಂದು ಹೇಳಲಾಗಿದ್ದು 45 ದಿನಗಳ ಒಳಗೆ ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.