ಅದಾನಿ ಸಮೂಹದ ಚೇರ್ಮನ್ ಗೌತಮ್ ಅದಾನಿ ಈ ವರ್ಷ ಎಲ್ಲ ಶ್ರೀಮಂತ ಭಾರತೀಯರ ಪೈಕಿ ಅತಿ ಹೆಚ್ಚು ಸಂಪತ್ತನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. 2020ರ ಆದಾಯದ ವಿಚಾರದಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿಯವರನ್ನೂ ಹಿಂದಿಕ್ಕಿದ್ದಾರೆ.
ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಅನುಸಾರ, ಗೌತಮ್ ಅದಾನಿಯ ಸಂಪತ್ತು ಈ ವರ್ಷ 19.1 ಬಿಲಿಯನ್ನಷ್ಟು ಹೆಚ್ಚಾಗಿದೆ. 2020ರಲ್ಲಿ ಮುಖೇಶ್ ಅಂಬಾನಿ ತಮ್ಮ ಸಂಪತ್ತನ್ನ 16.4 ಬಿಲಿಯನ್ನಷ್ಟು ಏರಿಕೆ ಮಾಡಿಕೊಂಡಿದ್ದಾರೆ. ರೂಪಾಯಿ ಮೌಲ್ಯದಲ್ಲಿ ಇದನ್ನ ವಿವರಿಸೋದಾದರೆ ಅದಾನಿ 2020ರ ಮೊದಲ 10 ತಿಂಗಳಲ್ಲಿ 1.41 ಲಕ್ಷ ಕೋಟಿ ರೂಪಾಯಿ ಅಥವಾ ಪ್ರತಿನಿತ್ಯ 449 ಕೋಟಿ ರೂಪಾಯಿಯನ್ನ ತಮ್ಮ ಸಂಪತ್ತಿಗೆ ಸೇರಿಸಿದ್ದಾರೆ.
ಅದಾನಿ ಸಂಪತ್ತು ಈ ವರ್ಷ 30.4 ಶತಕೋಟಿಗೆ ಏರಿಕೆ ಕಂಡಿದ್ದು ಈ ಮೂಲಕ ವಿಶ್ವದ 40ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂಬಾನಿ ಒಟ್ಟು ಆಸ್ತಿ ಮೌಲ್ಯ 75 ಬಿಲಿಯನ್ ಡಾಲರ್ ಆಗಿದ್ದು ಈ ಮೂಲಕ ವಿಶ್ವದ 10ನೇ ಶ್ರೀಮಂತ ಎಂಬ ಕೀರ್ತಿ ಪಡೆದುಕೊಂಡಿದ್ದಾರೆ.