ದೆಹಲಿಯ ಬಾಬಾ ಕಾ ಡಾಬಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಇಂತಹ ಅದೆಷ್ಟೋ ನೋವಿನ ಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿವೆ.
ಆಗ್ರಾದ ರೋಟಿವಾಲಿ ಅಮ್ಮ, ಬೆಂಗಳೂರಿನ ರೇವಣ ಸಿದ್ದಪ್ಪ , ಕೇರಳದ ಪಾರ್ವತಿ ಅಮ್ಮ ಹೀಗೆ ವೃದ್ದಾಪ್ಯದಲ್ಲೂ ಕೆಲಸ ಮಾಡುವ ಅನಿವಾರ್ಯತೆ ಇದ್ದರೂ ಸಹ ವ್ಯಾಪಾರವಿಲ್ಲದೇ ಕಂಗೆಟ್ಟಿದ್ದವರಿಗೆ ಸಾಮಾಜಿಕ ಜಾಲತಾಣವಾಗಿ ದಾರಿ ದೀಪವಾಗಿತ್ತು. ಇದೀಗ ಈ ಸಾಲಿಗೆ ಇನ್ನೊಂದು ನೋವಿನ ಕತೆ ಬಂದು ಸೇರಿದೆ.
ಕೊಲ್ಕತ್ತಾದ ಗರಿಯಾಹಾತ್ ರಸ್ತೆಯಲ್ಲಿ 80 ವರ್ಷದ ವೃದ್ಧ ಸುನಿಲ್ ಪಾಲ್ ಎಂಬವರು ತಮ್ಮ ಪೇಟಿಂಗ್ಸ್ ಮಾರುವ ಮೂಲಕ ಜೀವನ ನಡೆಸಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ. ಮಕ್ಕಳು ಮನೆಯಿಂದ ಹೊರಹಾಕಿದ ಕಾರಣಕ್ಕೆ ಸುನೀಲ್ ತಮ್ಮ 80ನೇ ವಯಸ್ಸಿನಲ್ಲೂ ದುಡಿಯುತ್ತಿದ್ದಾರೆ. ಫೋಟೋ ಹಿಡಿದುಕೊಂಡು ನಿಂತಿರುವ ಸುನೀಲ್ರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅತ್ಯುತ್ತಮ ಚಿತ್ರಗಳನ್ನ ರಚಿಸಿರುವ ಸುನೀಲ್ ಪಾಲ್ ತಮ್ಮ ಪೇಂಟಿಂಗ್ಸ್ಗಳನ್ನ ಕೇವಲ 50 ರಿಂದ 100 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ. ಈಗಾಗಲೇ ನೆಟ್ಟಿಗರು ಸುನಿಲ್ರ ಬಳಿ ತೆರಳಿ ಅವರ ಪೇಂಟಿಂಗ್ಸ್ ಖರೀದಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.