alex Certify ಇದೇ ಮೊದಲ ಬಾರಿಗೆ ಈ ವಿಧಾನಕ್ಕೆ ಮೊರೆ ಹೋಗಿದೆ ಕಾಂಗ್ರೆಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ಮೊದಲ ಬಾರಿಗೆ ಈ ವಿಧಾನಕ್ಕೆ ಮೊರೆ ಹೋಗಿದೆ ಕಾಂಗ್ರೆಸ್…!

ಭಾರತದ ಅತ್ಯಂತ ಹಿರಿಯ ಪಕ್ಷ ಕಾಂಗ್ರೆಸ್​ ಈ ಬಾರಿ ತನ್ನ ಪಕ್ಷದ ಅಧ್ಯಕ್ಷರ ಆಯ್ಕೆಗೆ ಡಿಜಿಟಲ್​ ಮಾರ್ಗವನ್ನ ಹುಡುಕಿಕೊಂಡಿದೆ. ಇದೇ ಮೊದಲ ಬಾರಿಗೆ ಎಐಸಿಸಿ ಪದಾಧಿಕಾರಿಗಳಿಗೆ ಡಿಜಿಟಲ್​ ಐಡಿ ಕಾರ್ಡ್​ಗಳು ವಿತರಣೆಯಾಗಲಿದೆ.

ಕಾಂಗ್ರಸ್​ ಅಧ್ಯಕ್ಷರಾಗಿ ರಾಹುಲ್​ ಗಾಂಧಿ ವಾಪಸ್ಸಾಗಲಿದ್ದರೆ ಎನ್ನಲಾಗ್ತಿದ್ದು ಆದರೆ ಯಾರಾದರೂ ಪ್ರತಿಸ್ಪರ್ಧಿ ದಿಢೀರ್​ ಅಂತಾ ಕಣಕ್ಕಿಳಿದುಬಿಟ್ಟರೆ ಗಾಂಧಿ ಮನೆತನದ ಲೆಕ್ಕಾಚಾರ ಕೊಂಚ ಏರುಪೇರಾಗಲಿದೆ. 2017ರಲ್ಲಿ ರಾಹುಲ್​ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾದ ರೀತಿಯಲ್ಲೇ ಎಲ್ಲಾ ಪ್ರಕ್ರಿಯೆಗಳು ನಡೆಯಲಿವೆ. 2022ರವರೆಗೆ ಅಧ್ಯಕ್ಷಗಾದಿ ಇರಲಿದೆ.

ಪಕ್ಷದಲ್ಲಿನ ಭಿನ್ನಾಭಿಪ್ರಾಯ ಹಾಗೂ ಕುಟುಂಬ ರಾಜಕಾರಣ ಅಪವಾದ ಹಿನ್ನೆಲೆ ಈ ಬಾರಿ ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾರದರ್ಶಕತೆ ತರಲು ನಿರ್ಧರಿಸಿದೆ.

2021ರಲ್ಲಿ ದೇಶದ 5 ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್​ ನಿರ್ಧರಿಸಿದೆ. ಈ ಬಾರಿ ಡಿಜಿಟಲ್​ ಚುನಾವಣೆ ನಡೆಯಲಿದ್ದು ಸದಸ್ಯರಿಗೆ ಶೀಘ್ರದಲ್ಲೇ ಡಿಜಿಟಲ್ ವೋಟರ್​​ ಐಡಿ ಕಾರ್ಡ್ ವಿತರಣೆಯಾಗಲಿದೆ. ಹಾಗೂ ಚುನಾವಣಾ ಪ್ರಾಧಿಕಾರದಲ್ಲಿ ಅರವಿಂದರ್​ ಸಿಂಗ್​ ಲವ್ಲಿ, ಸಂಸದ ರಾಜೇಶ್​ ಮಿಶ್ರಾ ಹಾಗೂ ಕರ್ನಾಟಕದ ಕೃಷ್ಣ ಭೈರೇಗೌಡ, ಸಂಸದ ಜೋತಿಮಣಿ, ಮಧುಸೂಧನ್ ಮಿಸ್ತ್ರಿ ಇರಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...