alex Certify ಆಸ್ಪತ್ರೆಯಿಂದಲೇ ನವಜಾತ ಶಿಶು ಕದ್ದು ಪರಾರಿ: ಮೂವರು ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಿಂದಲೇ ನವಜಾತ ಶಿಶು ಕದ್ದು ಪರಾರಿ: ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ನವಜಾತ ಶಿಶುವನ್ನು ಕದ್ದು ಮಾರಾಟ ಮಾಡಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರಿನ ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.

ನ.11ರಂದು ವಾಣಿವಿಲಾಸ ಆಸ್ಪತ್ರೆಯಿಂದ ಮಗುವನ್ನು ಕದ್ದು ಪಾರಾರಿಯಾಗಿದ್ದ ಮುವರು ಆರೋಪಿಗಳು, ಕುಮಾರಸ್ವಾಮಿ ಲೇಔಟ್ ನಲ್ಲಿರುವ ಅಬ್ದುಲ್ ಹಾಗೂ ಆರ್ಶಿಯಾ ದಂಪತಿಗೆ 80 ಸಾವಿರ ರೂ.ಗೆ ಮಾರಾಟ ಮಾಡಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಶಿಶುವನ್ನು ಪೋಷಕರು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಗುಣಮುಖವಾಗಿದ್ದ ಮಗುವನ್ನು ನ.11ರಂದು ಕರೆದೊಯ್ಯಲು ವೈದ್ಯರು ಅನೌನ್ಸ್ ಮಾಡಿದ್ದರು. ತಾಯಿಯ ಬಳಿ ಮಗು ಕರೆದೊಯ್ಯುವುದಾಗಿ ಹೇಳಿದ್ದ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಮಗು ಕದ್ದು ಪರಾರಿಯಾಗಿದ್ದಳು.

ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿನಿಂದಾಗಿ ನವಜಾತ ಶಿಶುವನ್ನು ಕದ್ದೊಯ್ಯಲಾಗಿದೆ ಎಂದು ಪೋಷಕರು ವಿ.ವಿ ಪುರಂ ಠಾಣೆ ಮೆಟ್ಟಿಲೇರಿದ್ದರು. ಇದೀಗ ಶಿಶುವನ್ನು ಕದ್ದು ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಬಧಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...