ಕೊರೊನಾ ವಿರುದ್ಧ ಅಭಿವೃದ್ಧಿ ಪಡಿಸಲಾಗ್ತಿರುವ ಆಕ್ಸ್ಫರ್ಡ್ ಲಸಿಕೆ 2021ರ ಫೆಬ್ರವರಿ ವೇಳೆಗೆ ಭಾರತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಭ್ಯವಾಗಲಿದೆ ಅಂತಾ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆಆದರ್ ಪೂನಾವಾಲಾ ಹೇಳಿದ್ದಾರೆ. ಏಪ್ರಿಲ್ ತಿಂಗಳ ವೇಳೆಗೆ ಸಾಮಾನ್ಯ ಜನರಿಗೂ ಈ ಲಸಿಕೆ ಸಿಗಲಿದ್ದು ಇದರ ಬೆಲೆ 1 ಸಾವಿರ ರೂಪಾಯಿ ಆಗಿರಲಿದೆ.
ಎಲ್ಲವೂ ಯೋಜನೆ ಪ್ರಕಾರ ನಡೆದರೆ ಮುಂದಿನ ವರ್ಷದ ಮಾರ್ಚ್ – ಏಪ್ರಿಲ್ ವೇಳೆಗೆ ಲಸಿಕೆ ತುರ್ತು ಸಿಬ್ಬಂದಿಗೆ ಲಭ್ಯವಾಗಲಿದೆ . 2024ರೊಳಗಾಗಿ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಸಿಗಲಿದೆ ಅಂತಾ ಹೇಳಿದ್ದಾರೆ.
ದೇಶದ ಸಂಪೂರ್ಣ ಜನಸಂಖ್ಯೆಗೆ ಲಸಿಕೆ ಸಿಗಬೇಕು ಅಂದರೆ ಎರಡು – ಮೂರು ವರ್ಷ ಕಾಯಲೇಬೇಕು ಎಂದು ಹೇಳಿದ್ದಾರೆ. ಪ್ರಸ್ತುತ ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ನಡೆಯುತ್ತಿದೆ.