ಬೆಂಗಳೂರು: ಕೊರೊನಾ ಮಹಾಮಾರಿಗೆ ಶೀಘ್ರದಲ್ಲಿಯೇ ಲಸಿಕೆ ಲಭ್ಯವಾಗಲಿರುವ ಹಿನ್ನೆಲೆಯಲ್ಲಿ ಲಸಿಕೆ ಸಂಗ್ರಹಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಕೋವಿಡ್ ವ್ಯಾಕ್ಸಿನ್ ಸ್ಟೋರ್ ಸಿದ್ಧಗೊಂಡಿದೆ.
ಕೋವಿಡ್ ವ್ಯಾಕ್ಸಿನ್ ಸಂಗ್ರಹಕ್ಕಾಗಿ ಬಿಬಿಎಂಪಿ ವತಿಯಿಂದ ಟೌನ್ ಹಾಲ್ ಬಳಿಯ ದಾಸಪ್ಪ ಆಸ್ಪತ್ರೆಯಲ್ಲಿ ಸಿದ್ಧತೆ ನಡೆಸಲಾಗಿದ್ದು, ಲಸಿಕೆ ಸಂಗ್ರಹಕ್ಕಾಗಿ ಕೋಲ್ಡ್ ಸ್ಟೋರೇಜ್ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆಸ್ಪತ್ರೆಗೆ ಭೇಟಿ ನೀಡಿ, ಲಸಿಕೆ ಸ್ಟೋರ್ ಮಾಡುವ ಬಾಕ್ಸ್ ಪರಿಶೀಲನೆ ನಡೆಸಿದರು. ಕೋಲ್ಡ್ ಸ್ಟೋರೇಜ್ ಇರುವ ವಿವಿಧ ಆಸ್ಪತ್ರೆಗಳಲ್ಲೂ ವ್ಯಾಕ್ಸಿನ್ ಸಂಗ್ರಹಕ್ಕೆ ಚಿಂತನೆ ನಡೆಸಲಾಗಿದೆ.
ಇನ್ನು ರಾಜ್ಯದ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಕೂಡ ಕೋವಿಡ್ ವ್ಯಾಕ್ಸಿನ್ ಸಂಗ್ರಹಕ್ಕೆ ಸಿದ್ಧತೆ ನಡೆಸಲಾಗಿದೆ. ಬಾಗಲಕೋಟೆಯಲ್ಲಿರುವ ಕೋಲ್ಡ್ ಸ್ಟೋರೇಜ್ ನಲ್ಲಿ 55 ಲಕ್ಷಕ್ಕಿಂತ ಅಧಿಕ ಲಸಿಕೆ ಸಂಗ್ರಹಿಸುವ ಸಾಮರ್ಥ್ಯವಿದ್ದು, ಇಲ್ಲಿಂದ ಕೊಪ್ಪಳ, ಗದಗ, ವಿಜಯಪುರ ಹೀಗೆ ಹಲವು ಭಾಗಗಳಿಗೆ ರವಾನೆ ಮಾಡಲು ಸಿದ್ಧತೆ ನಡೆಸಲಾಗಿದೆ.