alex Certify ಪತಿಯ ನಾಲ್ಕನೇ ಮದುವೆಗೆ ಮೂವರು ಪತ್ನಿಯರಿಂದಲೇ ಸಹಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ನಾಲ್ಕನೇ ಮದುವೆಗೆ ಮೂವರು ಪತ್ನಿಯರಿಂದಲೇ ಸಹಾಯ…!

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ. ಆದರೆ ಪಾಕಿಸ್ತಾನದ 20 ವರ್ಷದ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬದಲಾಗಿ ಮೂರು ಮದುವೆಯಾಗಿದ್ದು ಮಾತ್ರವಲ್ಲದೇ ನಾಲ್ಕನೇ ಮದುವೆಗೂ ತಯಾರಿ ನಡೆಸಿದ್ದಾನೆ. ವಿಶೇಷ ಏನಂದ್ರೆ ಈ ನಾಲ್ಕನೇ ಮದುವೆಗೆ ಆತನ ಮೂವರು ಪತ್ನಿಯರು ಸಾಥ್​ ನೀಡ್ತಿದ್ದಾರೆ.

ಅದ್ನಾನ್​ 16 ವರ್ಷ ವಯಸ್ಸಿನವನಾಗಿದ್ದಾಗ ಮೊದಲ ಮದುವೆ ನಡೆಯಿತು. ಇದಾಗಿ ನಾಲ್ಕು ವರ್ಷಗಳ ನಂತರ ಈತನಿಗೆ ಎರಡನೇ ಮದುವೆ ನಡೆದಿದೆ. ಹಾಗೂ ಕಳೆದ ವರ್ಷ ಮೂರನೇ ಮದುವೆಯಾಗಿದ್ದಾನೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಅದ್ನಾನ್​,  ನಾನು ತಿಂಗಳಿಗೆ 1 ರಿಂದ 1.5 ಲಕ್ಷ ರೂಪಾಯಿ ದುಡಿಯುತ್ತೇನೆ. ಒಂದೊಂದು ಮದುವೆಯಾಗುತ್ತಿದ್ದಂತೆ ನನ್ನ ಆದಾಯ ಹೆಚ್ಚಾಗುತ್ತಲೇ ಹೋಗಿದೆ. ಹೀಗಾಗಿ ನಾನು ಇನ್ನೊಂದು ಮದುವೆಗೆ ಪ್ಲಾನ್​ ಮಾಡಿದ್ದೇನೆ. ನನ್ನ ಮೂವರು ಪತ್ನಿಯರ ಹೆಸರು ಶುಂಭಲ್, ಶಬಾನಾ ಹಾಗೂ ಶಹಿದಾ. ನಾಲ್ಕನೇ ಪತ್ನಿಯಾಗಿ ಬರುವವಳ ಹೆಸರೂ ಎಸ್​ ಅಕ್ಷರದಿಂದ ಪ್ರಾರಂಭವಾಗಲಿ ಎಂಬ ಆಸೆ ಇದೆ ಅಂತಾ ಹೇಳಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...