ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮುಂದೂಡಿಕೆಯಾಗಿದೆ. ಜ.2ರಿಂದ ಆರಂಭವಾಗಬೇಕಿದ್ದ ಕೆ.ಪಿ.ಎಸ್.ಸಿ. ಮುಖ್ಯ ಪರೀಕ್ಷೆ ಮುಂದೂಡಿಕೆಯಾಗಿದೆ.
ಕೆ.ಪಿ.ಎಸ್.ಸಿ. ಹಾಗೂ ಯು.ಪಿ.ಎಸ್.ಸಿ. ಎರಡೂ ಪರೀಕ್ಷೆಗಳು ಒಟ್ಟಿಗೆ ಬಂದ ಹಿನ್ನೆಲೆಯಲ್ಲಿ ಕೆ.ಪಿ.ಎಸ್.ಸಿ. ಮುಖ್ಯ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ.
ಜನವರಿ 2ರಿಂದ 5ರವರೆಗೆ ನಡೆಯಬೇಕಿದ್ದ ಪರೀಕ್ಷೆ ದಿನಾಂಕವನ್ನು ಇದೀಗ ಫೆಬ್ರವರಿ 13ರಿಂದ 16ರ ವರೆಗೆ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.