alex Certify ವಾಟ್ಸಾಪ್ ಡಿಸಪಿಯರಿಂಗ್ ಆಪ್ಶನ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಡಿಸಪಿಯರಿಂಗ್ ಆಪ್ಶನ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ವಾಟ್ಸಾಪ್​ ಅಂದ್ರೆ ಗೊತ್ತಿಲ್ಲ ಎಂದು ಹೇಳುವ ಜನರೇ ಇಲ್ಲದಷ್ಟರ ಮಟ್ಟಿಗೆ ವಿಶ್ವದಲ್ಲಿ ವಾಟ್ಸಾಪ್​ ಮೆಸೆಂಜರ್​ ಬೆಳೆದು ನಿಂತಿದೆ. ಕಾಲ ಕಾಲಕ್ಕೆ ಬಳಕೆದಾರ ಸ್ನೇಹಿ ಬದಲಾವಣೆಗಳನ್ನ ತರುವ ಮೂಲಕ ವಾಟ್ಸಾಪ್​ ನೆಟ್ಟಿಗರ ಫೇವರಿಟ್​ ಮೆಸೆಂಜರ್​ ಸ್ಪಾಟ್​ ಆಗಿ ಬದಲಾಗಿದೆ.

ಇದೀಗ ವಾಟ್ಸಾಪ್​​ನಲ್ಲಿ ಡಿಸಪಿಯರಿಂಗ್​ ಆಪ್ಶನ್​ ನೀಡಲಾಗಿದ್ದು ಈ ಆಪ್ಶನ್​ನ್ನ ನೀವು ಆನ್​ ಮಾಡಿದರೆ ಒಂದು ವಾರದಲ್ಲಿ  ನಿಮ್ಮ ಎಲ್ಲ ಮೆಸೇಜ್​ಗಳು ಅಳಿಸಿ ಹೋಗಲಿವೆ. ಆದರೆ ಫೋಟೋ, ವಿಡಿಯೋಗಳು ಮಾತ್ರ ನಿಮ್ಮ ಮೊಬೈಲ್​ ಗ್ಯಾಲರಿಯಲ್ಲಿ ಹಾಗೆಯೇ ಉಳಿಯಲಿದೆ. ಹಾಗಾದ್ರೆ ಈ ಆಪ್ಶನ್​ ಹೇಗೆ ಆನ್​ ಮಾಡಬಹುದು ಅನ್ನೋದನ್ನ ನೋಡೋದಾದ್ರೆ…

ವಾಟ್ಸಾಪ್​ನಲ್ಲಿ ಕಾಂಟ್ಯಾಕ್ಟ್​ ಹೆಸರಿನ ಮೇಲೆ ಕ್ಲಿಕ್​ ಮಾಡಿ. ಅಲ್ಲಿ ಡಿಸಪಿಯರಿಂಗ್​ ಮೆಸೇಜ್​ ಎಂಬ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ. ಬಳಿಕ ಕಂಟಿನ್ಯೂ ಅಂತಾ ಪ್ರೆಸ್​ ಮಾಡಿ. ಈಗ ನಿಮ್ಮ ವಾಟ್ಸಾಪ್​ನಲ್ಲಿ ಈ ಹೊಸ ಆಯ್ಕೆ ಕೆಲಸ ಮಾಡಲು ಆರಂಭಿಸುತ್ತೆ.

 ನೀವು ಈ ಆಯ್ಕೆಯನ್ನ ಯಾವಾಗ ಬೇಕಿದ್ದರೂ ಬಂದ್​ ಮಾಡಬಹುದು. ನೀವು ಆಪ್ಶನ್​ ಆಫ್​ ಮಾಡಿದ್ದರೆ ನಿಮ್ಮ ಮೊಬೈಲ್​​ನಲ್ಲಿ ಹಳೆಯ ಚಾಟ್​ಗಳು ಹಾಗೆಯೇ ಉಳಿಯಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...