ಡಿ. ರೂಪಾ ಎಂದೇ ಜನಪ್ರಿಯರಾಗಿರುವ ಐಪಿಎಸ್ ಅಧಿಕಾರಿ ರೂಪಾ ದಿವಾಕರ್ ಮೌದ್ಗಿಲ್ 2017ರಲ್ಲಿ ಪರಪ್ಪನ ಅಗ್ರಹಾರದ ಅಕ್ರಮ ಬಯಲಿಗೆಳೆದು ಸುದ್ದಿಯಾಗಿದ್ದರು. ಇದೀಗ ತಮ್ಮ ಪೋಸ್ಟ್ ಮೂಲಕ ಸುದ್ದಿಯಾಗಿದ್ದಾರೆ ಐಪಿಎಸ್ ಅಧಿಕಾರಿ ಡಿ. ರೂಪಾ.
ನವೆಂಬರ್ 17ರಂದು ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದ ಡಿ. ರೂಪಾ, ದೀಪಾವಳಿ ಹಬ್ಬದಂದು ಪಟಾಕಿ ಬಳಕೆಯನ್ನ ವಿರೋಧಿಸಿದ್ದರು. ನಮ್ಮ ಸಂತೋಷ ಕೇವಲ ಪಟಾಕಿಗಳ ಮೇಲೆ ಅವಲಂಬಿತವಾಗಿದೆಯೇ..? ದೀಪಾವಳಿ ಆಚರಿಸೋಕೆ ಪಟಾಕಿಯನ್ನ ಹೊರತುಪಡಿಸಿ ಇನ್ನೂ ಹಲವು ಮಾರ್ಗಗಳಿವೆ. ಹಣತೆ ಬೆಳಗಿ, ಪ್ರೀತಿ ಪಾತ್ರರವನ್ನ ಭೇಟಿಯಾಗಿ ಸಿಹಿ ವಿನಿಮಯ ಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದರು.
ಈ ಪೋಸ್ಟ್ ಸಾಕಷ್ಟು ಪರ – ವಿರೋಧದ ಪ್ರತಿಕ್ರಿಯೆಯನ್ನ ಪಡೆದುಕೊಂಡಿತ್ತು. ಇತ್ತ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಅಶಕ್ತರಾದಾಗ ಅವರು ನಿಮ್ಮ ಮನೆ ಮುರೀತಾರೆ, ನಿಮ್ಮನ್ನ ಜೈಲಿಗೆ ಹಾಕುತ್ತಾರೆ, ನಿಮ್ಮ ಡಿಜಿಟಲ್ ಗುರುತನ್ನ ಕಸಿದುಕೊಳ್ಳೋದು ಕೊಲೆಗೆ ಸಮಾನವಾಗಿದೆ. ಇದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬಳಿಕ ಟ್ವಿಟರ್ನಲ್ಲಿ #BringBackTrueIndology ಅಭಿಯಾನ ಟ್ರೆಂಡ್ ಕ್ರಿಯೇಟ್ ಮಾಡಿದೆ.