ವೈರಲ್ ಆಯ್ತು ತಂದೆ – ಮಗನ ಮುದ್ದಾದ ಈ ವಿಡಿಯೋ..! 18-11-2020 1:47PM IST / No Comments / Posted In: Latest News, International ತಗ್ಗು ಪ್ರದೇಶದಲ್ಲಿ ಸಿಲುಕಿದ್ದ ತನ್ನ ತಂದೆಯ ಗಾಡಿಯನ್ನ ರಸ್ತೆಗೆ ತರಲು ಪುಟಾಣಿ ಕಂದಮ್ಮ ಪಡುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ ಅಮೆರಿಕದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮ್ಯಾನ್ ರಿಪೋಸ್ಟ್ ಮಾಡಿದ್ದು ಮತ್ತೊಮ್ಮೆ ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋದಲ್ಲಿ ತಂದೆಯ ಜೀಪ್ ತಗ್ಗು ಪ್ರದೇಶದಲ್ಲಿ ಸಿಲುಕಿರುತ್ತೆ. ಆ ಭಾರೀ ಜೀಪ್ನ ತನ್ನ ಆಟಿಕೆ ಕಾರಿಗೆ ಸಿಕ್ಕಿಸಿದ ಮಗು ಅದನ್ನ ಎಳೆಯೋಕೆ ಯತ್ನಿಸುತ್ತೆ. ತಂದೆ ಕೂಡ ಆಟಿಕೆ ಕಾರಿನ ಹಿಂದೆಯೇ ಜೀಪ್ನ್ನ ತೆಗೆದುಕೊಂಡು ಹೋಗುವ ಮೂಲಕ ಮಗನ ತುಂಟಾಟಕ್ಕೆ ಸಾಥ್ ನೀಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ರೆಕ್ಸ್, ಇವರು ವರ್ಷದ ತಂದೆ ಅಂತಾ ಹೊಗಳಿದ್ದಾರೆ. ಟ್ವೀಟಿಗರು ಸಹ ಇದ್ದರೆ ಇಂತಹ ತಂದೆ ಇರಬೇಕು ಅಂತಾ ಖುಷಿ ಪಟ್ಟಿದ್ದಾರೆ. Dad of the year… pic.twitter.com/0wd9onU45R — Rex Chapman🏇🏼 (@RexChapman) November 16, 2020