ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಆತ್ಮಚರಿತ್ರೆ ‘ದಿ ಪ್ರಾಮಿಸ್ಡ್ ಲ್ಯಾಂಡ್’ ಈಗಾಗಲೇ ಅನೇಕ ವಿಚಾರಗಳಿಂದ ಪ್ರಚಲಿತಕ್ಕೆ ಬಂದಿದೆ. ಬರಾಕ್ ಒಬಾಮಾ ತಮ್ಮ ಪುಸ್ತಕದಲ್ಲಿ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ರಿಗೆ ಯಾಕೆ ಪ್ರಧಾನಿ ಪಟ್ಟ ಬಿಟ್ಟುಕೊಟ್ಟರು ಎಂಬ ವಿಚಾರದ ಬಗ್ಗೆ ಉಲ್ಲೇಖಿಸಿದ್ದು ಈ ವಿಚಾರ ದೇಶದ ರಾಜಕಾರಣದಲ್ಲಿ ಸಂಚಲನ ಎಬ್ಬಿಸಿದೆ.
ರಾಹುಲ್ ಗಾಂಧಿಯ ರಾಜಕೀಯ ಬೆಳವಣಿಗೆಗೆ ಮೃದು ಸ್ವಭಾವದ ಮನಮೋಹನ್ ಸಿಂಗ್ ಯಾವುದೇ ಕಾರಣಕ್ಕೂ ಮುಳುವಾಗಲಾರರು ಎಂಬುದನ್ನ ಅರಿತೇ ಸೋನಿಯಾ ಗಾಂಧಿ ಈ ನಿರ್ಧಾರ ಕೈಗೊಂಡಿದ್ದಾರೆ ಅಂತಾ ಒಬಾಮಾ ಬರೆದಿದ್ದಾರೆ,
ಯಾವುದೇ ರಾಷ್ಟ್ರ ರಾಜಕಾರಣದ ಹಿನ್ನೆಲೆ ಹೊಂದಿರದ ಮನಮೋಹನ್ ಸಿಂಗ್ ತಮ್ಮ ಮಗನ ರಾಜಕೀಯ ಬೆಳವಣಿಗೆಗೆ ತೊಡಕಾಗೋದಿಲ್ಲ ಅನ್ನೋದನ್ನ ಸೋನಿಯಾ ಗಾಂಧಿ ಬಲವಾಗಿ ನಂಬಿದ್ದರು.
ದೇಶದ ಆರ್ಥಿಕ ಸುಧಾರಣೆಯಲ್ಲಿ ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮುಂಬೈ ಮೇಲೆ ದಾಳಿ ನಡೆದ ಬಳಿಕ ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮನಮೋಹನ್ ಸಿಂಗ್ ಸಿದ್ಧರಿರಲಿಲ್ಲ. ಇದು ಮನಮೋಹನ್ ಸಿಂಗ್ ರಾಜಕೀಯ ಜೀವನಕ್ಕೆ ಮುಳುವಾಯಿತು ಎಂದು ಬರೆದುಕೊಂಡಿದ್ದಾರೆ.