ಕಳೆದ 15 ವರ್ಷಗಳಿಂದಲೂ ಟೀಮ್ ಇಂಡಿಯಾ ಕ್ರಿಕೆಟ್ ಟೀಮ್ ಗಳಿಗೆ ಅಮೆರಿಕಾ ಮೂಲಕ ಕ್ರೀಡಾ ಉಡುಪುಗಳ ಕಂಪನಿ ನೈಕಿಯ ಕಿಟ್ಗಳನ್ನು ನೀಡಲಾಗುತ್ತಿದೆ. ಈ ಸಂಬಂಧವನ್ನು ಇದೀಗ ಬಿಸಿಸಿಐ ಕಡಿದುಕೊಂಡಿದ್ದು, ಹೊಸ ಪ್ರಯೋಜಕರ ಜೊತೆ ಕೈಜೋಡಿಸಿರೋದಾಗಿ ಅಧಿಕೃತವಾಗಿ ಹೇಳಿಕೊಂಡಿದೆ.
ಹೊಸ ಪ್ರಾಯೋಜಕರಾಗಿ ಮೊಬೈಲ್ ಪ್ರೀಮಿಯಂ ಲೀಗ್ ಸ್ಪೋರ್ಟ್ಸ್ ಅಂದರೆ ಎಂಪಿಎಲ್ ಜೊತೆ ಸಂಬಂಧ ಬೆಳೆಸಲಾಗಿದೆ. ಮೂರು ವರ್ಷಗಳ ಒಪ್ಪಂದ ಇದಾಗಿದೆ. 2023ರವರೆಗೆ ಇವರೇ ರಾಷ್ಟ್ರೀಯ ಪುರುಷ ತಂಡ, ರಾಷ್ಟ್ರೀಯ ಮಹಿಳಾ ತಂಡ ಹಾಗೂ ಅಂಡರ್ 19 ತಂಡಕ್ಕೂ ಇವರೇ ಕಿಟ್ ಪ್ರಯೋಜಕರಾಗಿರುತ್ತಾರೆ.
ಇನ್ನು ಆಸೀಸ್ ವಿರುದ್ಧದ ಪಂದ್ಯಗಳಲ್ಲಿ ಹೊಸ ಜರ್ಸಿಯಲ್ಲಿ ಟೀಂ ಇಂಡಿಯಾ ಕಾಣಿಸಿಕೊಳ್ಳಲಿದೆ. ಇನ್ನು ಎಂಪಿಎಲ್ ಜೊತೆಗಿನ ಒಪ್ಪಂದ 2023ರ ಡಿಸೆಂಬರ್ ವರೆಗೆ ಇರಲಿದೆ. ಎಂಪಿಎಲ್ ಸ್ಪೋರ್ಟ್ಸ್ ಕಿಟ್ನೊಂದಿಗೆ ಹೊಸ ಅಧ್ಯಾಯ ಆರಂಭವಾಗಲಿದ್ದು ಅದನ್ನು ಎದುರು ನೋಡುತ್ತಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.