ಕೊರೊನಾ ಮಹಾಮಾರಿಯ ಆರ್ಭಟ ದೇಶದಲ್ಲಿ ಕೊಂಚ ಮಟ್ಟಿಗೆ ತಣ್ಣಗಾಗಿದ್ದರೂ ಇದರ ಎರಡನೇ ಅಲೆ ಬರಬಹುದು ಎಂದು ಈಗಾಗಲೇ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ಕೊರೊನಾ ಪ್ರಾರಂಭವಾದಾಗಿನಿಂದಲೂ ಇದಕ್ಕೆ ಲಸಿಕೆ ಕಂಡು ಹಿಡಿಯುತ್ತಲೇ ಇದ್ದಾರೆ. ಈಗಾಗಲೇ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆಗಳ ಪರೀಕ್ಷೆ ನಡೆಸಿವೆ. ಆ ಕ್ಲಿನಿಕಲ್ ಟ್ರಯಲ್ ಕೊನೆಯ ಹಂತ ತಲುಪಿವೆ. ಇನ್ನೇನು ಎರಡ್ಮೂರು ತಿಂಗಳಲ್ಲಿ ಲಸಿಕೆ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.
ಈ ಬೆನ್ನಲ್ಲೇ ಇದೀಗ ಕೊರೊನಾ ಕೊಲ್ಲಲು ಮತ್ತೊಂದು ಅಸ್ತ್ರ ಇದೆ ಎಂದು ಎನ್ನಲಾಗಿದೆ. ಹೌದು, ಮೌತ್ ವಾಶ್‌ನಿಂದಲೂ ಕೊರೊನಾವನ್ನು ಕೊಲ್ಲಬಹುದು ಎಂದು ಹೇಳಲಾಗುತ್ತಿದೆ. ಬ್ರಿಟನ್‌ನ ಕಾಡ್ರಿಫ್ ವಿವಿ ವಿಜ್ಞಾನಿಗಳು ಹೇಳಿರುವ ಪ್ರಕಾರ ಮೌತ್‌ವಾಶ್ 30 ಸೆಕೆಂಡ್‌ಗಳಲ್ಲಿ ಕೊರೊನಾವನ್ನು ಕೊಲ್ಲುತ್ತದೆಯಂತೆ.
ಅದರಲ್ಲೂ ಶೇಕಡ 0.07 ಸೆಟಿಲ್‌ಪೈರೀಡಿಯಂ ಕ್ಲೋರೈಟ್ ಇರುವ ಮೌತ್‌ವಾಶ್‌ಗಳು ಕೊರೊನಾವನ್ನು ಕೊಲ್ಲಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚಿನ ಕ್ಲಿನಿಕಲ್ ಪ್ರಯೋಗ ಅಗತ್ಯ ಇದೆ ಎಂತಲೂ ಅಲ್ಲಿನ ವಿಜ್ಞಾನಿಗಳು ಹೇಳಿದ್ದಾರೆ.