ನವದೆಹಲಿ: ಕೇಂದ್ರ ಸರ್ಕಾರ ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಉಚಿತವಾಗಿ ಮೂರು ತಿಂಗಳ ಕಾಲ ಅಡುಗೆ ಅನಿಲ ಸಿಲಿಂಡರ್ ವಿತರಿಸುವುದಾಗಿ ಹೇಳಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿಸಿದ ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸಲಾಗುವುದು.
ಸುಮಾರು 8 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 9,709 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಿದೆ. ಫಲಾನುಭವಿಗಳಿಗೆ ಮೂರು ತಿಂಗಳ ಉಚಿತ ಸಿಲಿಂಡರ್ ಖರೀದಿ ಹಣವನ್ನು ಖಾತೆಗೆ ಪಾವತಿಸಲಾಗುತ್ತದೆ.
ಭಾರತ್ ಗ್ಯಾಸ್ ಕಂಪನಿಯ ಸಿಲಿಂಡರ್ ಪಡೆದ ಉಜ್ವಲ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ಮೊದಲು ಭಾರತ್ ಗ್ಯಾಸ್ ವೆಬ್ ಸೈಟ್ ಗೆ ಭೇಟಿ ನೀಡಿ. ಉಜ್ವಲ ಯೋಜನೆ ಮೇಲೆ ಕ್ಲಿಕ್ ಮಾಡಿ, ರಾಜ್ಯವನ್ನು ಆಯ್ಕೆಮಾಡಬೇಕು. ಬಳಿಕ ಜಿಲ್ಲೆಯನ್ನು ಆಯ್ಕೆಮಾಡಿ, ಸರ್ಚ್ ಬಟನ್ ಕ್ಲಿಕ್ ಮಾಡಿದರೆ ಉಜ್ವಲ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಪಟ್ಟಿಯಲ್ಲಿ ಹೆಸರು ಇದ್ದವರ ಖಾತೆಗೆ ಮೂರು ತಿಂಗಳ ಎಲ್ಪಿಜಿ ಸಿಲಿಂಡರ್ ಖರೀದಿ ಹಣ ಪಾವತಿಸಲಾಗುವುದು ಎಂದು ಹೇಳಲಾಗಿದೆ.