ಪತಿ ಹೂಸು ಬಿಟ್ಟಿದ್ದಕ್ಕೆ ಮಹಿಳೆಯೊಬ್ಬರು ತಮ್ಮ ಮನೆ ನಾಯಿಗೆ ಚಿಕಿತ್ಸೆ ಕೊಡಿಸಿದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಗರ್ಭಿಣಿ ತನ್ನ ಪತಿ ಹಾಗೂ ಮುದ್ದಿನ ನಾಯಿಯೊಂದಿಗೆ ಕೂತು ಊಟ ಮಾಡ್ತಿದ್ದ ವೇಳೆ ಮನೆಯಲ್ಲಿ ಹೂಸು ವಾಸನೆ ಬಂದಿದೆ. ಈಕೆ ಗರ್ಭಿಣಿ ಬೇರೆ ಆಗಿದ್ದರಿಂದ ಆ ಕೆಟ್ಟ ವಾಸನೆ ತಡೆಯೋದು ಆಕೆಗೆ ತುಂಬಾನೆ ಕಷ್ಟವಾಗಿತ್ತು.
ಪತ್ನಿ ಪಕ್ಕದಲ್ಲೇ ಇದ್ದ ಪತಿ ಇದು ನಾಯಿಯ ಕೆಲಸ ಎಂದು ಹೇಳಿದ್ದಾನೆ. ಆದರೆ ದಿನದಿಂದ ದಿನಕ್ಕೆ ಮನೆಯಲ್ಲಿ ಹೂಸಿನ ಸಮಸ್ಯೆ ಹೆಚ್ಚಾಗತೊಡಗಿತ್ತು.
ಹೀಗಾಗಿ ಗರ್ಭಿಣಿ, ನಾಯಿಯನ್ನ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಬಳಿಕ ನಾಯಿಗೆ ದುಬಾರಿ ವೆಚ್ಚ ಮಾಡಿ ಟ್ರೀಟ್ಮೆಂಟ್ ಶುರು ಮಾಡಲಾಗಿತ್ತು. ಆದರೂ ಹೂಸು ಸಮಸ್ಯೆ ಮಾತ್ರ ಕಡಿಮೆಯಾಗಿರಲಿಲ್ಲ.
ಸುಮಾರು ದಿನಗಳ ಬಳಿಕ ಹೂಸು ಬಿಡ್ತಿರೋದು ನಾಯಿಯಲ್ಲ ಬದಲಾಗಿ ಆಕೆಯ ಪತಿ ಎಂಬ ವಿಚಾರ ಬೆಳಕಿಗೆ ಬಂದಿದೆ.
ನಾಯಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವವರೆಗೂ ಸುಮ್ಮನೇ ಇದ್ದ ಪತಿಯ ಕಳ್ಳಾಟದಿಂದಾಗಿ ಮಹಿಳೆ ಕೆಂಡಾಮಂಡಲರಾಗಿದ್ದಾರೆ. ತನ್ನ ಸುಳ್ಳನ್ನ ಮುಚ್ಚಲು ಶ್ವಾನದ ಜೀವಕ್ಕೆ ಅಪಾಯ ತಂದಿದ್ದಕ್ಕೆ ಮಹಿಳೆ ಭಾವುಕರಾದ್ರು.
ಬಳಿಕ ಪತಿಯನ್ನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಶುರು ಮಾಡಿಸಿದ್ದು ಮಾತ್ರವಲ್ಲದೇ ನಾಯಿಗಾಗಿ ತಾನು ಖರ್ಚು ಮಾಡಿದ ಹಣದಲ್ಲಿ ಅರ್ಧ ಹಣವನ್ನ ಪತಿಯಿಂದ ವಾಪಾಸ್ ಪಡೆದಿದ್ದಾಳೆ.