ಅವಳು ಸುಮಾರು ಮೂರು ಮೀಟರ್ ಎತ್ತರದವರೆಗೆ ತನ್ನ ಕೈಯನ್ನ ಎತ್ತಿದ್ದಳು. ಗಾಳಿಯ ರಭಸಕ್ಕೆ ಆಕೆಯ ಕೂದಲು ಹಾರುತ್ತಿತ್ತು. ಅವಳ ಪಾದದ ಬುಡದಲ್ಲಿ ಗಡಿಯಾರವೊಂದು ಮುರಿದುಬಿದ್ದಿತ್ತು. ಆಗಸ್ಟ್ನಲ್ಲಿ ಬೈರುತ್ ಬಂದರಿನಲ್ಲಿ ಸಂಭವಿಸಿದ ಸ್ಫೋಟ ನಿಮಗೆಲ್ಲ ನೆನಪಿರಬಹುದು.
ಲೆಬನಾನಿನ ಕಲಾವಿದೆ ಹಯಾತ್ ನಾಜರ್ ಅವರ ಹೆಸರಿಡದ ಈ ಪ್ರತಿಮೆ ಸ್ಪೋಟದಲ್ಲಿ ಒಡೆದ ಗಾಜು ಹಾಗೂ ಡಬ್ಬಿಗಳಿಂದ ಮಾಡಲ್ಪಟ್ಟಿದೆ. ಈ ಸ್ಪೋಟ 200 ಜನರನ್ನ ಬಲಿ ತೆಗೆದುಕೊಂಡಿದ್ದರೆ, 6000 ಮಂದಿಯನ್ನ ಗಾಯಗೊಳಿಸಿತ್ತು.
ಈ ಪ್ರತಿಮೆ ವಿಚಾರವಾಗಿ ಮಾತನಾಡಿದ ನಾಜರ್, ಈ ಪ್ರತಿಮೆಯನ್ನ ನೋಡ್ತಿದ್ರೆ ಸ್ಫೋಟ ಈಗಷ್ಟೇ ನಡೆದಿದೆ ಎಂದೆನಿಸುತ್ತೆ. ಆ ಪ್ರತಿಮೆ ನಡೆಯಲು ಯತ್ನಿಸುತ್ತಾ ಇರುವಂತೆ ಭಾಸವಾಗುತ್ತೆ. ಕಲ್ಲು ಮಣ್ಣುಗಳ ರಾಶಿಯಿಂದ ಈ ಪ್ರತಿಮೆ ಹೊರಬರುತ್ತಿದೆಯೇನೋ ಎನಿಸುತ್ತೆ. ಇದು ನಮ್ಮ ಸತ್ಯ ಎಂದು ಹೇಳಿದ್ದಾರೆ.