ಪ್ರತಿ ವರ್ಷ ಆಗಸ್ಟ್ ವೇಳೆ ಯೂರೋಪ್ನಿಂದ ಭಾರತಕ್ಕೆ ಹಾರಿ ಬರುವ ಗ್ರೀನಿಸ್ ವಾಬ್ಲರ್ ಹೆಸರಿನ ಅಪರೂಪದ ತಳಿಗೆ ಸೇರಿದ ಹಕ್ಕಿಯೊಂದು ಉತ್ತರ ಪ್ರದೇಶದ ಛಾಯಾಗ್ರಾಹಕರೊಬ್ಬರ ಕಣ್ಣಿಗೆ ಬಿದ್ದಿದೆ.
ಇಲ್ಲಿನ ರಪ್ತಿ ಸಾಗರ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ಛಾಯಾಗ್ರಾಹಕ ಅನುಪಮ್ ಅಗರ್ವಾಲ್ಗೆ ಈ ಪಕ್ಷಿ ಕಾಣಿಸಿಕೊಂಡಿದೆ. ಗುಬ್ಬಚ್ಚಿಯಂತೆ ಕಾಣುವ ಈ ಪುಟಾಣಿ ಪಕ್ಷಿಯನ್ನು ಪತ್ತೆ ಮಾಡುವುದು ಬಹಳ ಕಷ್ಟ.
ವನ್ಯಜೀವಿ ಛಾಯಾಗ್ರಾಹಕರಾದ ಅಗರ್ವಾಲ್ ಮರದ ರೆಂಬೆಗಳ ಮೇಲೆ ಆಟವಾಡುತ್ತಿದ್ದ ಈ ಪಕ್ಷಿಯ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಆಗಸ್ಟ್ನಲ್ಲಿ ಉತ್ತರ ಭಾರತಕ್ಕೆ ಬರುವ ಈ ಪಕ್ಷಿಗಳು ನವೆಂಬರ್ ವೇಳಗೆ ದಕ್ಷಿಣ ಭಾರತದತ್ತ ಬರುತ್ತವೆ.