ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಲ್ಲ ಕಡೆ ಭಾರೀ ಸುದ್ದಿ ಮಾಡುತ್ತಿದ್ದಾರೆ. ಕೃಷ್ಣವರ್ಣೀಯರ ಪೈಕಿ ಉಪಾಧ್ಯಕ್ಷೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್, ನೂತನ ಅಧ್ಯಕ್ಷ ಜೋ ಬಿಡೆನ್ ಜೊತೆಗೆ ಶ್ವೇತಭವನ ಪ್ರವೇಶಿಸಲಿದ್ದಾರೆ.
ಈ ಐತಿಹಾಸಿಕ ಘಟನೆಯು ಜಗತ್ತಿನಾದ್ಯಂತ ಎಲ್ಲ ಮಹಿಳೆಯರಿಗೆ ಹೆಮ್ಮೆಯ ವಿಷಯವಾಗಿದೆ. ಅದರಲ್ಲೂ ಭಾರತೀಯ ಮೂಲದ ಮಹಿಳೆಯ ಮಗಳಾಗಿರುವ ಕಮಲಾರ ಈ ಏರುಹಾದಿ ಭಾರತೀಯ ಸಮುದಾಯದಕ್ಕೂ ಹೆಮ್ಮೆ ತರಿಸಿದೆ.
ಶ್ವೇತಭವನದ ಎರಡನೆ ಅತ್ಯಂತ ಬಲಶಾಲಿ ಹುದ್ದೆಗೆ ಕಮಲಾ ಆಯ್ಕೆಯಾದ ವಿಚಾರವನ್ನು ನೆಟ್ಟಿಗ ಸಮುದಾಯ ಸಂಭ್ರಮಿಸುತ್ತಿದೆ.
ಇಲ್ಲಿನ ಬ್ರೂಕ್ಲಿನ್ ಮೂಲದ ಶಾಲೆಯೊಂದರ ವಿದ್ಯಾರ್ಥಿಗಳು ಕಮಲಾ ಬಗ್ಗೆ ಮೆಚ್ಚಿ ಕವನವೊಂದನ್ನು ಮಾಡಿರುವ ವಿಡಿಯೋವೊಂದನ್ನು ಶಾಲೆಯ ಮುಖ್ಯ ಪ್ರಾಧ್ಯಾಪಕಿ ಲೇಕ್ಷಾ ವಿಲಿಯಮ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ನಮ್ಮಂತೆಯೇ ಕಾಣುತ್ತಿರುವ ಉಪಾಧ್ಯಕ್ಷೆಯನ್ನು ನಾವೀಗ ನೋಡುತ್ತಿದ್ದೇವೆ” ಎಂದು ಮಕ್ಕಳು ಈ ಕವನದಲ್ಲಿ ಹೇಳುತ್ತಿದ್ದಾರೆ.