ಸದಾ ಭಾರತದ ತಂಟೆಗೆ ಬಂದು ಕಾಲು ಕೆರೆದು ಜಗಳ ತೆಗೆಯೋ ಚೀನಾ ಇನ್ನೂ ತನ್ನ ನರಿ ಬುದ್ದಿ ಬಿಟ್ಟಿಲ್ಲ. ಆಪ್ ಬ್ಯಾನ್, ಚೀನಾ ವಸ್ತುಗಳು ಬ್ಯಾನ್, ಹೀಗೆ ಸಾಕಷ್ಟು ಭಾರಿ ಹೊಡೆತ ತಿಂದಿರುವ ಚೀನಾ ಇದೀಗ ಮತ್ತೊಮ್ಮೆ ನಷ್ಟ ಅನುಭವಿಸಿದೆ.
ಹೌದು, ದೀಪಾವಳಿ ಹಬ್ಬದಲ್ಲಿ ಚೀನಾ ವಸ್ತುಗಳು ಹೆಚ್ಚಾಗಿರುತ್ತಿದ್ದನ್ನು ನಾವೆಲ್ಲಾ ನೋಡಿದ್ದೆವು. ಆದರೆ ಈ ವರ್ಷ ಇದಕ್ಕೆ ಕಡಿವಾಣ ಬಿದ್ದಿದೆ. ಹೀಗಾಗಿ ಚೀನಾಗೆ 40,000 ಕೋಟಿ ರೂಪಾಯಿ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಹೇಳಿರುವ ಪ್ರಕಾರ ಎಫ್‌ಎಂಸಿಜಿ ಸರಕುಗಳು ಹೆಚ್ಚು ಮಾರಾಟವಾಗಿದ್ದು, ಚೀನಾ ವಸ್ತುಗಳ ಬಹಿಷ್ಕಾರದ ನಡುವೆಯೂ 72,000 ಕೋಟಿ ವ್ಯಾಪಾರ-ವಹಿವಾಟು ನಡೆದಿದೆ ಎನ್ನಲಾಗಿದೆ. ಈ ಮೂಲಕ ಚೀನಾಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಿದೆ.