ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಜೈಲಿನಲ್ಲಿಯೇ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ್ದಾರೆ. ಅಷ್ಟೇ ಅಲ್ಲ ಜೈಲಧಿಕಾರಿಗಳಿಗಾಗಿ ಸ್ಪೆಷಲ್ ಗಿಫ್ಟ್ ಸಿದ್ಧಪಡಿಸಿರುವ ನಟಿಮಣಿಯರು ವಿಶೇಷವಾಗಿ ಹಬ್ಬದ ಶುಭ ಕೋರಿದ್ದಾರೆ.
ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಕುಟುಂಬದವರ ಜೊತೆ, ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸುತ್ತಿದ್ದ ರಾಗಿಣಿ ಹಾಗೂ ಸಂಜನಾಗೆ ಈ ಬಾರಿ ಕಂಬಿಗಳ ಹಿಂದೆ ಆಚರಿಸಬೇಕಾದ ಸ್ಥಿತಿ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ ಹಾಗೂ ಸಂಜನಾ, ಮಹಿಳಾ ಸೆಲ್ ಗಳ ಮುಂದೆ ದೀಪಗಳನ್ನು ಬೆಳಗಿ ಜೈಲು ಸಿಬ್ಬಂದಿಗಳ ಜೊತೆ ದೀಪಾವಳಿ ಆಚರಿಸಿದ್ದಾರೆ.
ಅಲ್ಲದೇ ನಟಿ ರಾಗಿಣಿ, ಜೈಲಿನಲ್ಲಿದ್ದ ಪೇಪರ್ ಸಂಗ್ರಹಿಸಿ, ಗ್ರೀಟಿಂಗ್ಸ್ ತಯಾರಿಸಿ ಜೈಲಧಿಕಾರಿಗಳಿಗೆ ನೀಡುವ ಮೂಲಕ ಹಬ್ಬದ ಶುಭಾಶಯಗಳನ್ನು ಕೋರಿದ್ದು ವಿಶೇಷ.