ಆಸ್ಟ್ರೇಲಿಯಾ ಕ್ರಿಕೆಟ್ ತಂಡ 2018-19ಕ್ಕೆ ಹೋಲಿಸಿದ್ದರೆ ಮುಂದಿನ ತಿಂಗಳು ನಡೆಯಲಿರುವ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೌಲಿಂಗ್ ದಾಳಿ ಪರಾಕ್ರಮವಾಗಿರಲಿದೆ ಅಂತಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಜಸ್ಟೀನ್ ಲ್ಯಾಂಗರ್ ಹೇಳಿದ್ದಾರೆ.
ಹಿಂದಿನ ಸರಣಿಯಲ್ಲಿ ಭಾರತ, ಆಸ್ಟ್ರೇಲಿಯಾವನ್ನ 2-1 ಅಂತರದಲ್ಲಿ ಸೋಲಿಸಿತ್ತು. ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧ ಅನುಭವಿಸಿದ್ದೇ ಈ ಸೋಲಿಗೆ ಕಾರಣ ಎಂದು ಆರೋಪಿಸಲಾಗಿತ್ತು.
ಟೀಂ ಇಂಡಿಯಾ ಕಳೆದ ಸರಣಿಯಲ್ಲಿ ಆಸ್ಟ್ರೇಲಿಯಾವನ್ನ ಸೋಲಿಸಲು ಸಮರ್ಥವಾಗಿತ್ತು. ಆದರೆ ಈಗ ನಮ್ಮ ತಂಡ ಬಲಿಷ್ಠವಾಗಿದ್ದು ಹಿಂದಿನ ಸರಣಿಯಲ್ಲಿ ಮಾಡಿದ ತಪ್ಪನ್ನ ಮಾಡೋದಿಲ್ಲ ಅಂತಾ ಹೇಳಿದ್ದಾರೆ.