alex Certify BIG NEWS: ಈ ಬಾರಿಯೂ ಯೋಧರ ಜೊತೆ ಪ್ರಧಾನಿ ಬೆಳಕಿನ ಹಬ್ಬ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ಬಾರಿಯೂ ಯೋಧರ ಜೊತೆ ಪ್ರಧಾನಿ ಬೆಳಕಿನ ಹಬ್ಬ..?

ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಬಾರಿಯ ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುವ ಸಾಧ್ಯತೆ ಇದೆ. 2014ರಿಂದ ಭಾರತದ ಪ್ರಧಾನಿ ಸ್ಥಾನಕ್ಕೆ ಏರಿದಾಗಿನಿಂದಲೂ ನರೇಂದ್ರ ಮೋದಿ ತಮ್ಮ ದೀಪಾವಳಿ ಹಬ್ಬವನ್ನ ಭಾರತೀಯ ಯೋಧರ ಜೊತೆಗೆ ಆಚರಿಸುತ್ತಿದ್ದಾರೆ.

ಕೆಲ ವರದಿಗಳ ಪ್ರಕಾರ ಮೋದಿ ಈ ಬಾರಿ ಗುಜರಾತ್​ನಲ್ಲಿ ದೀಪಾವಳಿ ಆಚರಿಸ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಕೆಲ ವರದಿಗಳು ಪ್ರಧಾನಿ ಈ ಬಾರಿ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಬೆಳಕಿನ ಹಬ್ಬ ಆಚರಿಸ್ತಾರೆ ಎನ್ನಲಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಈ ಬಾರಿ ನಮ್ಮನ್ನ ರಕ್ಷಿಸುತ್ತಿರುವ ಭಾರತೀಯ ಯೋಧರಿಗಾಗಿ ದೀಪ ಬೆಳಗೋಣ. ದೇಶಕ್ಕಾಗಿ ಹೋರಾಡುತ್ತಿರುವ ಭಾರತೀಯ ಯೋಧರನ್ನ ಹೊಗಳಲು ನನಗೆ ಪದಗಳು ಸಾಲುತ್ತಿಲ್ಲ. ಯೋಧರ ಕುಟುಂಬಕ್ಕೂ ನಾವು ಕೃತಜ್ಞತೆ ಸಲ್ಲಿಸೋಣ ಎಂದು ಬರೆದುಕೊಂಡಿದ್ದಾರೆ.

— Narendra Modi (@narendramodi) November 13, 2020

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...