ಗಿನ್ನಿಸ್ ವಿಶ್ವ ದಾಖಲೆ ಮಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅತಿ ಎತ್ತರದ ದೇಹ, ಭಾರವಾದ ವ್ಯಕ್ತಿ ಹೀಗೆ ದೇಹ ರಚನೆ ಮೂಲಕ ವಿಶ್ವ ದಾಖಲೆ ಮಾಡೋದು ಬೇರೆ. ದೇಹ ದಂಡಿಸಿ ದಾಖಲೆ ಸೃಷ್ಟಿಸೋದೆ ಬೇರೆ.
ಇಂತಹದ್ದೇ ಒಂದು ಪ್ರಯತ್ನದಲ್ಲಿ ಮಾಜಿ ಕಬ್ಬಡ್ಡಿ ಆಟಗಾರ ಮಹಾರಾಷ್ಟ್ರದ ಸಣ್ಣ ಗ್ರಾಮವೊಂದರ ನಿವಾಸಿ 180 ಸೆಕೆಂಡ್ಗಳಲ್ಲಿ 210 ಬಾರಿ ಸ್ಕ್ವಾಟ್ಸ್ (ಉಠ್ ಬೈಟ್) ಮಾಡುವ ಗುರಿ ಹೊಂದಿದ್ದಾರೆ.
ಔರಾಂಗಾಬಾದ್ನ ಸುಪೆ ಗ್ರಾಮದ ನಿವಾಸಿ ಅಪ್ಪಾಸಾಹೇಬ್ ಗಾಯಕ್ವಾಡ್ ಈ ರೀತಿಯ ಸಾಧನೆ ಮೂಲಕ ವಿಶ್ವ ದಾಖಲೆ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಎರಡನೇ ಬಾರಿಗೆ ಪ್ರಯತ್ನ ಪಡ್ತಿದ್ದಾರೆ.
2018ರಲ್ಲೇ ಅಪ್ಪಾ ಸಾಹೇಬ್ ಸ್ಕ್ವಾಟ್ಸ್ ಮಾಡಿ ವಿಶ್ವ ದಾಖಲೆ ಮಾಡಲು ಯತ್ನಿಸಿದ್ದರು. ಆದರೆ ಸ್ಕ್ವಾಟ್ಸ್ ಮಾಡುವ ವೇಳೆ ಅವರ ಕಾಲಿನ ಸ್ಥಾನ ತಪ್ಪಾಗಿದ್ದರಿಂದ ದಾಖಲೆ ಮಾಡೋದು ಅಸಾಧ್ಯವಾಯ್ತು.
ಇದೀಗ ಮತ್ತೊಮ್ಮೆ ಈ ಸಾಧನೆ ಮಾಡಲೇಬೇಕು ಎಂದು ಪಣ ತೊಟ್ಟಿರುವ ಅಪ್ಪಾಸಾಹೇಬ್ ಇದಕ್ಕಾಗಿ ಕಠಿಣ ಶ್ರಮ ಪಡ್ತಿದ್ದಾರೆ.