ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಎಲ್ಲಾ ವರ್ಗದವರು ಸಂತಾಪ ಸೂಚಿಸಿದ್ದು, ಕಿರಿಕ್ ಕೀರ್ತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ರವಿ ಬೆಳಗೆರೆ ಅವರ ಬಗ್ಗೆ ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
20 ವರ್ಷದ ಹಿಂದೆ, ಪ್ರತಿ ಗುರುವಾರ ಬೆಳಿಗ್ಗೆ ಎದ್ದರೆ ‘ಹಾಯ್ ಬೆಂಗಳೂರ್’ಬರೋ ತನಕ ಕಾದು ಕಾದು ಸಾಕಾಗ್ತಿತ್ತು…..ಓ ಮನಸೇ ಪ್ರತಿ ಎಡಿಷನ್ ನನ್ ಹತ್ತಿರ ಇತ್ತು…..ಓದಿದ ಮೊದಲ ಪುಸ್ತಕ ‘ಹಿಮಾಲಯ ಬ್ಲಂಡರ್’…..ರಾತ್ರಿ ಮಲಗೋಕೆ ಅಮ್ಮ ಒತ್ತಾಯ ಮಾಡಿದ್ರು,’ಕ್ರೈಂಡೈರಿ’ ನೋಡದೆ ಮಲಗಲೇ ಇಲ್ಲ…’ಹೇಳಿ ಹೋಗು ಕಾರಣ’ ಓದೋಕೆ ಶುರು ಮಾಡಿದಾಗ, ಮುಗಿಯುವ ತನಕ ಮೇಲೇಳಲೇ ಇಲ್ಲ…..ಇಲ್ಲಿಯ ತನಕ ‘ಇದನ್ನು ಓದಿ’ ಅಂತ ‘ಹಿಮಾಲಯನ್ ಬ್ಲಂಡರ್’ ಐವತ್ತು ಜನಕ್ಕೆ ಕೊಟ್ಟಿದೀನಿ…ನನ್ನ ಬಗ್ಗೆ ‘ಹಾಯ್ ಬೆಂಗಳೂರ್’ ನಲ್ಲಿ ನಾಲ್ಕು ಒಳ್ಳೆಯ ಸಾಲುಗಳು ಬಂದಾಗ ಹಿರಿಹಿರಿ ಹಿಗ್ಗಿದ್ದೇನೆ…ಸುವರ್ಣ ನ್ಯೂಸ್ ನಲ್ಲಿದ್ದಾಗ ಅವರ ಶೋಗೆ ವಾಹಿನಿಯ ‘ಎಪಿಸೋಡ್ ಕೋ ಆರ್ಡಿನೇಟರ್’ ಆಗಿದ್ದಕ್ಕೆ ಹೆಮ್ಮೆ ಪಟ್ಟಿದ್ದೆ…ಅವರಿಗೆ ಪ್ರತಿ ಶಿಕ್ಷಕರ ದಿನದಂದು ಧನ್ಯವಾದ ಹೇಳಿದ್ದೆ…ಇವತ್ತು ಅವರಿಲ್ಲ ಆ ಗತ್ತು ಡೋಂಟ್ ಕೇರ್ ಅಟಿಟ್ಯೂಡ್, ಹಾಸ್ಯಪ್ರಜ್ಞೆ ಯಪ್ಪಾ ಅವರಿಗವರೇ ಸಾಟಿ….ಯಾರಿಗೆ ಇಷ್ಟವಾಗ್ತಿದ್ರೋ ಯಾರಿಗೂ ಇಷ್ಟವಾಗ್ತಿರಲಿಲ್ವೋ ಸೆಕೆಂಡರಿ…ಆದ್ರೆ ಅವರು ಕನ್ನಡದ ವಿಚಾರದಲ್ಲಿ ‘ಅಕ್ಷರ ರಾಕ್ಷಸ’ ಅನ್ನೋದು ಪ್ರೈಮರಿ…ಬರಹ ಮಾತು ಎರಡು ಒಲಿದ ಕೆಲವೇ ಪತ್ರಕರ್ತರಲ್ಲಿ ಅಗ್ರಪಂಕ್ತಿಯಲ್ಲಿದ್ದ ಅವರಾತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ… ಎಂದು ಬರೆದುಕೊಂಡಿದ್ದಾರೆ.