ದೇಶದಲ್ಲಿ ಕೊರೊನಾ, ಲಾಕ್ ಡೌನ್ ನಂತ್ರ ಅನೇಕರ ಜೀವನ ಸಂಕಷ್ಟದಲ್ಲಿದೆ.ಲೈಂಗಿಕ ಕಾರ್ಯಕರ್ತೆಯರು ಕೂಡ ಕೊರೊನಾದಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವ್ರ ನೆರವಿಗೆ ಸುಪ್ರೀಂ ಕೋರ್ಟ್ ಬಂದಿದೆ. ಲೈಂಗಿಕ ಕಾರ್ಯಕರ್ತೆಯರಿಗೂ ರೇಷನ್ ನೀಡುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಸುಪ್ರೀಂ ಸೂಚನೆ ನಂತ್ರ ಎಲ್ಲ ರಾಜ್ಯಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ರೇಷನ್ ಕಾರ್ಡ್ ನೀಡಲಾಗ್ತಿದೆ.
ಜಾರ್ಖಂಡ್ ಸರ್ಕಾರ ಈಗಾಗಲೇ 12 ಸಾವಿರ ಲೈಂಗಿಕ ಕಾರ್ಯಕರ್ತೆಯರಿಗೆ ರೇಷನ್ ಕಾರ್ಡ್ ನೀಡಲು ನಿರ್ಧರಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರೇಷನ್ ಕಾರ್ಡ್ ನೀಡಲು ಎಲ್ಲ ಸರ್ಕಾರಗಳು ಮುಂದಾಗ್ತಿವೆ. ಆನ್ಲೈನ್ ಹಾಗೂ ಆಫ್ ಲೈನ್ ಎರಡರಲ್ಲೂ ಲೈಂಗಿಕ ಕಾರ್ಯಕರ್ತೆಯರು ಅರ್ಜಿ ಸಲ್ಲಿಸಬಹುದಾಗಿದೆ. ಲೈಂಗಿಕ ಕಾರ್ಯಕರ್ತೆಯರ ಗುರುತು ಮತ್ತು ವಿಳಾಸವನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಗೌಪ್ಯವಾಗಿಡಲಾಗುವುದು.
ಪಡಿತರ ಚೀಟಿ ತಯಾರಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಪಡಿತರ ಚೀಟಿ ತಯಾರಿಸಲು ಆಧಾರ್ ಕಾರ್ಡ್, ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆ, ಮತದಾರರ ಕಾರ್ಡ್, ಪಾಸ್‌ಪೋರ್ಟ್, ಐಡಿ ಪ್ರೂಫ್ ಆಗಿ ಸರ್ಕಾರ ನೀಡಿರುವ ಯಾವುದೇ ಐ ಕಾರ್ಡ್, ಹೆಲ್ತ್ ಕಾರ್ಡ್, ಚಾಲನಾ ಪರವಾನಗಿ ಇದ್ದರೆ ನೀಡಬೇಕಾಗುತ್ತದೆ.