ಇಂದು ಧನ ತ್ರಯೋದಶಿಯನ್ನು ಆಚರಿಸಲಾಗ್ತಿದೆ. ಇಂದು ಶಾಪಿಂಗ್ ಮಾಡುವುದು ಶುಭಕರವೆಂದು ಪರಿಗಣಿಸಲಾಗಿದೆ. ತಾಯಿ ಲಕ್ಷ್ಮಿ, ಭಗವಾನ್ ಧನ್ವಂತರಿ ಮತ್ತು ಕುಬೇರನನ್ನು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಭಕ್ತರು ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ.
ಧನ ತ್ರಯೋದಶಿ ದಿನ ತಾಯಿ ಲಕ್ಷ್ಮಿ ಮೂರ್ತಿ ಅಥವಾ ಫೋಟೋವನ್ನು ತಂದು ಪೂಜೆ ಮಾಡಲಾಗುತ್ತದೆ. ಪೂಜೆ ಮಾಡುವ ಮೊದಲು ಯಾವ ಫೋಟೋವನ್ನು ತರಬೇಕೆಂದು ತಿಳಿದಿರಬೇಕು. ಈ ದಿನ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಫೋಟೋವನ್ನು ತರಬೇಕು.
ಲಕ್ಷ್ಮಿಯನ್ನು ಚಂಚಲೆ ಎಂದು ಕರೆಯಲಾಗುತ್ತದೆ. ಹಾಗಾಗಿ ನಿಂತಿರುವ ಲಕ್ಷ್ಮಿ ಮೂರ್ತಿ ಅಥವಾ ಫೋಟೋವನ್ನು ಪೂಜೆಗೆ ತರಬೇಡಿ. ಕುಳಿತಿರುವ ತಾಯಿ ಫೋಟೋವನ್ನು ಮಾತ್ರ ಪೂಜಿಸಬೇಕು. ಲಕ್ಷ್ಮಿ ಕೈನಿಂದ ಪಾತ್ರೆಗೆ ಹಣ ಬೀಳುವಂತಿರುವ ಫೋಟೋಗಳನ್ನು ಕೂಡ ಪೂಜಿಸಬಹುದು. ಲಕ್ಷ್ಮಿ ಅಕ್ಕಪಕ್ಕ ಆನೆಗಳು ನಿಂತಿದ್ರೆ ಆ ಮೂರ್ತಿ ಅಥವಾ ಫೋಟೋ ಕೂಡ ಶುಭವೆಂದು ಪರಿಗಣಿಸಲಾಗಿದೆ. ಹಾಗೆ ಮುರಿದ ಲಕ್ಷ್ಮಿ ವಿಗ್ರಹ ಹಾಗೂ ಫೋಟೋವನ್ನು ಮನೆಯಲ್ಲಿ ಇಡಬಾರದು. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003