ವಿಪರೀತ ಬೊಜ್ಜು ಅನಾರೋಗ್ಯದ ಸಂಕೇತ. ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಹೆಚ್ಚುವರಿ ಮಾಂಸ ಬೆಳೆದರೆ ನಿಮಗೆ ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಡುವುದು ಖಚಿತ ಎಂಬರ್ಥವಿದೆ.
ನಾವು ಸೇವಿಸುವ ಕ್ಯಾಲೊರಿ ಪ್ರಮಾಣ ಇಳಿಸುವ ಮೂಲಕ ಕ್ಯಾಲೊರಿಯನ್ನು ಕರಗಿಸಬಹುದು. ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಟೈಮ್ ಟೇಬಲ್ ಸರಿಯಾಗಿ ಅನುಸರಿಸದಿರುವುದು ಬೊಜ್ಜಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದನ್ನು ಕಡಿಮೆ ಮಾಡಲು ವ್ಯಾಯಾಮ ಮಾಡುವುದು ಮೊದಲ ದಾರಿ. ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುವ ವ್ಯಾಯಾಮವನ್ನೇ ಮಾಡಿ ನೋಡಿ.
ರಾತ್ರಿ ಮಲಗುವ ಕನಿಷ್ಠ ಎರಡು ಗಂಟೆ ಮುನ್ನ ಊಟ ಮುಗಿಸಿ. ರಾತ್ರಿಯ ಊಟ ಲೈಟ್ ಆಗಿರಲಿ. ಜೀರಿಗೆ ಪುಡಿ, ಒಣಶುಂಠಿ, ಹಿಪ್ಪಲಿ, ಕರಿಮೆಣಸು, ಸೈಂಧವ ಲವಣಗಳನ್ನು ಸಮಪ್ರಮಾಣದಲ್ಲಿ ಬೆರೆಸಿ. ಪುಡಿ ಮಾಡಿ. ಒಂದು ಲೋಟ ಹುಳಿ ಇಲ್ಲದ ಮಜ್ಜಿಗೆಗೆ ಬೆರೆಸಿ. ನಿತ್ಯ ಇದನ್ನು ಎರಡು ಬಾರಿ ಕುಡಿಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ಬೊಜ್ಜು ಕರಗುತ್ತದೆ.
ಜೀರಿಗೆ ಪುಡಿಯಲ್ಲಿ ಐರನ್ ಗುಣವಿದ್ದು ಅಸಿಡಿಟಿಯನ್ನು ಹೊರಹಾಕುತ್ತದೆ. ಒಣಶುಂಠಿ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಿಪ್ಪಲಿ ಟಾಕ್ಸಿನ್ ತೊಲಗಿಸಿದರೆ ಕರಿಮೆಣಸು ಜೀರ್ಣಕ್ರಿಯೆ ಚುರುಕುಗೊಳಿಸಿ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.