ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಪಬ್ಜಿ ಮೊಬೈಲ್ ಗೇಮ್ ಮತ್ತೆ ಭಾರತಕ್ಕೆ ಬರುತ್ತಿದೆ. ದಕ್ಷಿಣ ಕೊರಿಯಾದ ಕಂಪನಿ ಪಿಯುಬಿಜಿ ಕಾರ್ಪೊರೇಷನ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸ ಆಟವನ್ನು ತರುವುದಾಗಿ ಘೋಷಿಸಿದೆ.
ಹೊಸ ಗೇಮ್ ಭಾರತಕ್ಕೆ ಮಾತ್ರ ಸೀಮಿತವಾಗಿರಲಿದೆ. ಈ ಬಾರಿ ಕಂಪನಿಯು ಚೀನಾದ ಕಂಪನಿಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಇದ್ರ ಜೊತೆಗೆ ಈ ಹೊಸ ಅಪ್ಲಿಕೇಶನ್ ಡೇಟಾ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದೆ ಎಂದು ಕಂಪನಿ ಹೇಳಿದೆ.
ಪಬ್ಜಿ ಗೇಮ್ ಇಂಡಿಯಾವನ್ನು ವಿಶೇಷವಾಗಿ ಭಾರತಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಸುರಕ್ಷಿತ ಮತ್ತು ಆರೋಗ್ಯಕರ ಆಟಗಳನ್ನು ಬಳಕೆದಾರರಿಗೆ ನೀಡುವುದಾಗಿ ಕಂಪನಿ ಹೇಳಿದೆ. ಪಿಬಿಜಿ ಕಾರ್ಪೊರೇಷನ್ ಕಂಪನಿಯು ಭಾರತದಲ್ಲಿ ಉಪ-ಅಂಗಸಂಸ್ಥೆಯನ್ನು ರಚಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ಕಂಪನಿಯು 100 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಇದಕ್ಕಾಗಿ ಸ್ಥಳೀಯ ಕಚೇರಿಗಳನ್ನು ಸಿದ್ಧಪಡಿಸಲಾಗುವುದು ಎಂದು ಕಂಪನಿ ಹೇಳಿದೆ.
ಕಂಪನಿ ಚೀನಾ ಕಂಪನಿ ಟೆನ್ಸೆಂಟ್ ಜೊತೆ ಒಪ್ಪಂದ ಮುರಿಯುವುದಿಲ್ಲ. ಬೇರೆ ದೇಶಗಳಲ್ಲಿ ಟೆನ್ಸೆಂಟ್ ಜೊತೆಗಿನ ಒಪ್ಪಂದ ಮುಂದುವರೆಯಲಿದೆ. ಆದ್ರೆ ಭಾರತಕ್ಕೆ ಟೆನ್ಸೆಂಟ್ ಜೊತೆ ಬರುವುದಿಲ್ಲವೆಂದು ಕಂಪನಿ ಹೇಳಿದೆ.