ಆರ್ಥಿಕತೆಯನ್ನು ಸುಧಾರಿಸಲು ಮೋದಿ ಸರ್ಕಾರ ಮತ್ತೊಂದು ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರೊಂದಿಗೆ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತದಲ್ಲಿ ಉದ್ಯೋಗವನ್ನು ಉತ್ತೇಜಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಮೋದಿ ಸರ್ಕಾರ ವಲಸೆ ಕಾರ್ಮಿಕರಿಗಾಗಿ ವಿಶೇಷ ರೀತಿಯ ಪೋರ್ಟಲ್ ತರಲಿದೆ.
ಹೊಸ ಉದ್ಯೋಗವನ್ನು ಉತ್ತೇಜಿಸುವುದು ಇದರ ಉದ್ದೇಶ. ಇಪಿಎಫ್ ಒ ನೋಂದಾಯಿತವಲ್ಲದ ಕಂಪನಿಗಳು ಹೊಸದಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರೆ ಅವರಿಗೂ ಇದರ ಲಾಭ ಸಿಗಲಿದೆ. ಮಾಸಿಕ ವೇತನ 15,000 ರೂಪಾಯಿಗಿಂತ ಕಡಿಮೆ ಅಥವಾ 2020 ರ ಮಾರ್ಚ್ 1 ರಿಂದ 2020 ರ ಸೆಪ್ಟೆಂಬರ್ 31 ರ ನಡುವೆ ಉದ್ಯೋಗ ಕಳೆದುಕೊಂಡವರಿಗೆ ಇದರ ಲಾಭ ಸಿಗಲಿದೆ.
ಈ ಯೋಜನೆಯಡಿ ದೇಶದಲ್ಲಿ ಉದ್ಯೋಗಾವಕಾಶಗಳು ವೇಗವಾಗಿ ಹೆಚ್ಚಾಗಲಿವೆ. ರಿಲೀಫ್ ಪ್ಯಾಕೇಜ್ ಅಡಿಯಲ್ಲಿ, ದೇಶದ ಸಂಘಟಿತ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಅಸಂಘಟಿತ ವಲಯವನ್ನು ಸಂಘಟಿಸುವ ಕೆಲಸವೂ ನಡೆಯಲಿದೆ.