alex Certify ದೀಪಾವಳಿಯಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಯಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರದರ್ಶನ

ಉತ್ತರ ಪ್ರದೇಶದಲ್ಲಿರುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದೀಪಗಳ ಹಬ್ಬಕ್ಕೂ ಮುನ್ನ ಲಲಿತ ಅಕಾಡೆಮಿ ಜನ್​ ಜಾನ್​ ಕೆ ರಾಮ್​ ಎಂಬ ಶೀರ್ಷಿಕೆಯಡಿಯಲ್ಲಿ 25 ರಾಮನ ಪ್ರತಿಮೆಗಳನ್ನ ಪ್ರದರ್ಶಿಸಲಿದೆ.

ಅಯೋಧ್ಯೆಯ ಲಕ್ಷ್ಮಣಪುರದಲ್ಲಿ ನಿರ್ಮಿಸಲಾಗಿರುವ ಭಗವಾನ್​ ಶ್ರೀರಾಮನ ವಿಶಿಷ್ಟವಾದ ವಿಗ್ರಹಗಳು ರಾಮ ಭಕ್ತರನ್ನ ಆಕರ್ಷಿಸುತ್ತಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್​ ಈ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ರಾಮ ಕಥಾ ಉದ್ಯಾನವನದಲ್ಲಿ ಈ ಪ್ರದರ್ಶನ ನಡೆಯಲಿದ್ದು, ಕಾನ್ಪುರ, ಬನಾರಸ್​, ಪ್ರಯಾಗರಾಜ್​​, ಮಥುರಾ, ಲಕ್ನೋದ ಶಿಲ್ಪಿಗಳು ತಯಾರಿಸಿದ ರಾಮನ ಅಪ್ರತಿಮ ಪ್ರತಿಮೆಗಳನ್ನ ಸದ್ಯದಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...