alex Certify ವಿಶ್ವ ದಾಖಲೆ ಸೃಷ್ಟಿಸಿದ ಈ ಉಂಗುರದ ಬೆಲೆ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ದಾಖಲೆ ಸೃಷ್ಟಿಸಿದ ಈ ಉಂಗುರದ ಬೆಲೆ ಎಷ್ಟು ಗೊತ್ತಾ…?

ವಿರಳವಾದ ವಜ್ರದ ಕಲೆಕ್ಷನ್​ಗಳಲ್ಲಿ ಒಂದಾದ ನೇರಳೆ ಮಿಶ್ರಿತ ಕೆಂಪು ಬಣ್ಣದ ವಜ್ರದ ಉಂಗುರ ಜೆನಿವಾದಲ್ಲಿ ಬರೋಬ್ಬರಿ 2.77 ಮಿಲಿಯನ್​ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.

ವಿಎಸ್​​2 ಕ್ಲಾರಿಟಿ ಹಾಗೂ 1.05 ಕ್ಯಾರಟ್​​ನ ಈ ವಜ್ರವನ್ನ ಪ್ಲಾಟಿನಮ್​ ಉಂಗುರದಲ್ಲಿ ಇರಿಸಲಾಗಿದೆ. ಈ ನೇರಳೆ ಮಿಶ್ರಿತ ಕೆಂಪು ಬಣ್ಣದ ವಜ್ರದ ಪಕ್ಕದಲ್ಲಿ ಹೃದಾಯಾಕಾರದ 2 ವಜ್ರಗಳನ್ನ ಇರಿಸಲಾಗಿದೆ. ಈ ವಜ್ರದ ವಿಶಿಷ್ಠವಾದ ಬಣ್ಣವೇ ಇದರ ಬೆಲೆ ದುಬಾರಿಯಾಗಲು ಕಾರಣವಾಗಿದೆ.

ಈ ವಿಶಿಷ್ಠವಾದ ಉಂಗುರವನ್ನ ದುಬೈ ಮೂಲದ ಭಾರತೀಯ ವಲಸಿಗ ಆಶಿಶ್​​ ವಿಜಯ್​ ಜೈನ್​ ಒಡೆತನದ ಟಿಯಾರಾ ಜೆಮ್ಸ್​ & ಜ್ಯುವೆಲ್ಲರಿ ಅಂಗಡಿ ಖರೀದಿಸಿದೆ.

ದುಬಾರಿ ಉಂಗುರವನ್ನ ಖರೀದಿಸಿದ ಬಳಿಕ ಮಾತನಾಡಿದ ಆಶಿಶ್​ ಜೈನ್​, ಆಭರಣ ಮಾರುಕಟ್ಟೆ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ ಹಾಗೂ ದಿನದಿಂದ ದಿನಕ್ಕೆ ಸ್ಪರ್ಧೆಯೂ ಜಾಸ್ತಿಯಾಗುತ್ತಿದೆ. ಕೊರೊನಾ ಸಂಕಷ್ಟವಿದ್ದರೂ ಜನರಿಗೆ ಆಭರಣ ಮೇಲಿನ ಅದರಲ್ಲೂ ಈ ರೀತಿಯ ವಿಶಿಷ್ಠ ಹರಳುಗಳ ಮೇಲಿನ ಆಸಕ್ತಿ ಕಡಿಮೆಯಾಗಿಲ್ಲ ಅಂತಾ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...