ದೆಹಲಿಯ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ಕೊರೊನಾ ಸೋಂಕಿತರಾಗಿದ್ದಾರೆ. ಹಾಗೂ ದೆಹಲಿಯಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬ ನಿವಾಸಿಗೂ ಸೋಂಕು ತಾಕಿದೆ ಅಂತಾ ದೆಹಲಿ ಹೈಕೋರ್ಟ್ ಹೇಳಿದೆ. ಸೇರೋ ಸರ್ವೇ ದೆಹಲಿಯಲ್ಲಿ ನಡೆಸಿದ ಸರ್ವೇಯಲ್ಲಿ ಈ ಅಂಶ ಬಯಲಾಗಿದೆ.
ದೆಹಲಿ ಕೊರೊನಾ ವೈರಸ್ ಕುರಿತಂತೆ ಸಿರೋ ನಡೆಸಿದ ನಾಲ್ಕನೇ ಸುತ್ತಿನ ಸಮೀಕ್ಷೆಯ ವರದಿ ಪರಿಶೀಲಿಸಿದ ನ್ಯಾ. ಹಿಮಾ ಕೊಹ್ಲಿ ಹಾಗೂ ಸುಬ್ರಮಣಿಯನ್ ಪ್ರಸಾದ್ ನೇತೃತ್ವದ ನ್ಯಾಯಪೀಠ, ಸೆಪ್ಟೆಂಬರ್ಗೆ ಹೋಲಿಸಿದ್ರೆ ದೆಹಲಿಯಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ಮತ್ತಷ್ಟು ಜಾಸ್ತಿಯಾಗಿದೆ ಅಂತಾ ಹೇಳಿದೆ.
ನಗರದಲ್ಲಿ ನಾಲ್ವರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುತ್ತೆ. ಅಲ್ಲದೇ ಈ ವೈರಸ್ ರಾಷ್ಟ್ರ ರಾಜಧಾನಿಯಲ್ಲಿರುವ ಪ್ರತಿಯೊಂದು ಮನೆಯನ್ನೂ ಮುಟ್ಟಿದೆ. ಆದರೆ ದೆಹಲಿ ಸರ್ಕಾರ ಏಕೆ ಕೊರೊನಾ ನಿಯಮಗಳನ್ನ ಸಡಿಲಿಸುತ್ತಿದೆ ಅಂತಾ ನ್ಯಾಯಪೀಠ ಪ್ರಶ್ನೆ ಮಾಡಿದೆ.