ಟ್ರಕ್ ಗೆ ಅಡ್ಡ ಬಂದ ಆನೆ ಮಾಡಿದ್ದೇನು ಗೊತ್ತಾ…? 12-11-2020 12:27PM IST / No Comments / Posted In: Latest News, India ಆನೆ ನಡೆದಿದ್ದೇ ಹಾದಿ ಅನ್ನೋ ಮಾತಿದೆ. ರಸ್ತೆಯಲ್ಲಿ ಹೋಗ್ತಾ ಆನೆ ದೂರದಲ್ಲಿ ಕಾಣಿಸ್ತಾ ಇದ್ದರು ನಮ್ಮ ಎದೆ ಝಲ್ ಎನ್ನುತ್ತೆ. ಅಂತದ್ರಲ್ಲಿ ಆನೆ ನಮ್ಮ ಮೇಲೆಯೇ ಅಟ್ಯಾಕ್ ಮಾಡಿದ್ರಂತೂ ಕತೆ ಮುಗೀತು ಅಂತಾನೇ ಲೆಕ್ಕ. ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬವರು ವಿಡಿಯೋವೊಂದನ್ನ ಶೇರ್ ಮಾಡಿದ್ದು ಇದರಲ್ಲಿ ಆನೆ ಟ್ರಕ್ ಒಳಗೆ ಸೊಂಡಿಲು ಹಾಕಿ ಡಜಲ್ ಗಟ್ಟಲೆ ಬಾಳೆಹಣ್ಣನ್ನ ಹೊತ್ತೊಯ್ದಿದೆ. ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ರಸ್ತೆಯಲ್ಲಿ ಆನೆಯನ್ನ ನೋಡಿದ ಟ್ರಕ್ ಡ್ರೈವರ್ ಗಾಡಿಯನ್ನ ನಿಲ್ಲಿಸಿದ್ದಾರೆ. ಅದಕ್ಕೆ ಕೆಲ ಬಾಳೆ ಹಣ್ಣನ್ನ ಕೊಡಬೇಕು ಅನ್ನೋವಷ್ಟರಲ್ಲಿ ಕಿಟಕಿಯೊಳಗೆ ಸೊಂಡಿಲು ಹಾಕಿದ ಆನೆ ಬಲವಂತದಿಂದ ಬಾಳೆ ಹಣ್ಣುಗಳನ್ನ ಎಳೆದೊಯ್ದಿದೆ. ಈ ವಿಡಿಯೋ ಪೋಸ್ಟ್ ಮಾಡಿದ ಕಸ್ವಾನ್ ಹೈವೇಯಲ್ಲಿ ಹಗಲು ದರೋಡೆ ಅಂತಾ ಕ್ಯಾಪ್ಶನ್ ನೀಡಿದ್ದಾರೆ. ಅಲ್ಲದೇ ಕಾಡು ಪ್ರಾಣಿಗಳಿಗೆ ರಸ್ತೆಯಲ್ಲಿ ಹೋಗುವವರು ತಿಂಡಿ – ತಿನಿಸುಗಳನ್ನ ನೀಡಿದ್ರೆ ಹೀಗೆ ಆಗುತ್ತೆ. ಆ ಪ್ರಾಣಿಗಳು ಅದನ್ನೇ ಅಭ್ಯಾಸ ಮಾಡಿಕೊಂಡು ಮನುಷ್ಯನ ಜೀವಕ್ಕೆ ತೊಂದರೆ ಕೊಡುವ ಸಾಧ್ಯತೆ ಇರುತ್ತೆ ಅಂತಾ ಬರೆದುಕೊಂಡಿದ್ದಾರೆ. Daylight robbery on a highway. A forward. pic.twitter.com/QqGfa90gF5 — Parveen Kaswan, IFS (@ParveenKaswan) November 11, 2020