alex Certify ರೈಲ್ವೇ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೇ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸೆಪ್ಟೆಂಬರ್​ 5ರಂದು ಕೇಂದ್ರ ರೈಲ್ವೇ ಸಚಿವಾಲಯ ನೀಡಿದ ನವೀಕೃತ ದಿನಾಂಕದ ಪ್ರಕಾರ RRB NTPC ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ರೈಲ್ವೆಯ ತಾಂತ್ರಿಕೇತರ ವರ್ಗದ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಪರೀಕ್ಷೆ ನಡೆಯಲಿದೆ.

ಆರ್​ ಆರ್​​ ಬಿ ಎನ್​​ಟಿಪಿಸಿ ಜೊತೆಗೆ ಭಾರತೀಯ ರೈಲ್ವೇ ಇಲಾಖೆಯಲ್ಲಿ ಸಚಿವಾಲಯ, ಪ್ರತ್ಯೇಕ ವರ್ಗದ ಹುದ್ದೆ ಹಾಗೂ ಗ್ರೂಪ್​ ಡಿ ಹುದ್ದೆಗಳಿಗಾಗಿಯೂ ಪ್ರವೇಶ ಪರೀಕ್ಷೆ ನಡೆಯಲಿದೆ. ಆದರೆಆರ್‌ಆರ್‌ಬಿ ಎನ್‌ಟಿಪಿಸಿ ಮತ್ತು ಆರ್‌ಆರ್‌ಬಿ ಗ್ರೂಪ್ ಡಿ ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ.

ಆರ್‌ಆರ್‌ಬಿ ಸಚಿವಾಲಯ ಮತ್ತು ಪ್ರತ್ಯೇಕ ವರ್ಗದ ಹುದ್ದೆಗಳ ಪರೀಕ್ಷೆ ಡಿಸೆಂಬರ್ 15 ರಿಂದ 23 ರವರೆಗೆ ನಡೆಯಲಿದೆ.

ಈ ಪರೀಕ್ಷೆಗಳು ಎಷ್ಟು ದಿನಗಳವರೆಗೆ ನಡೆಯುತ್ತೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. 20118ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ಆರ್​ಆರ್​ಬಿ ಗ್ರೂಪ್​ ಡಿ ಪರೀಕ್ಷೆ 152 ಶಿಫ್ಟ್​ಗಳಲ್ಲಿ ನಡೆಸಲಾಗಿದ್ದು, ಒಂದೊಂದು ಶಿಫ್ಟ್​​ನಲ್ಲೂ 1,64,026 ಅಭ್ಯರ್ಥಿಗಳು ಹಾಜರಾಗಿದ್ದಾರೆ.

ಈ ಬಾರಿಯ ಪರೀಕ್ಷೆಗೆ ಪ್ರವೇಶ ಪತ್ರವನ್ನ ಶೀಘ್ರದಲ್ಲೇ ನೀಡಲು ಇಲಾಖೆ ತಯಾರಿ ನಡೆಸಿದೆ. ಪರೀಕ್ಷೆಗೆ ಕನಿಷ್ಟ 4 ದಿನಗಳ ಮೊದಲಾಗಿ ಪ್ರವೇಶ ಪತ್ರ ಸಿಗುವ ಸಾಧ್ಯತೆ ಇದೆ. ಅಲ್ಲದೇ ಅಂಚೆ ಮೂಲಕ ಯಾವುದೇ ಪ್ರವೇಶ ಪತ್ರ ಕಳಿಸಲಾಗಲ್ಲ ಎಂದು ಆರ್​ಆರ್​ಬಿ ಅಧಿಸೂಚನೆಯಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...